ದೇವನಹಳ್ಳಿ: ‘ಮುಂಬರುವ ಬೇಸಿಗೆಯಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವು ಕೊರತೆಯಾಗದಂತೆ ಅಧಿಕಾರಿಗಳು ಪೂರ್ವ ತಯಾರಿ ಮಾಡಬೇಕು. ಈ ವಿಚಾರದಲ್ಲಿ ಯಾವುದೇ ಸಮಸ್ಯೆ ಉದ್ಭವಿಸಿದರು ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್. ಮುನಿಯಪ್ಪ ಎಚ್ಚರಿಕೆ ನೀಡಿದರು.

ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಫೆಬ್ರವರಿಯಿಂದ ಮೇ ವರೆಗೆ ಬೇಸಿಗೆ ಇರಲಿದೆ. ಆದರೂ ಸಮಸ್ಯೆ ಬಂದರೆ ‘ಹಣ ಇಲ್ಲ, ಅನುಮತಿ ಇಲ್ಲ’ ಎನ್ನುವ ಉತ್ತರ ಬೇಡ. ಸಮಸ್ಯೆ ಉಂಟಾಗುವ ಮೊದಲೇ ಕೆಲಸ ಮುಗಿಸಬೇಕು. ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಕೊಳವೆಬಾವಿ ತೋಡಿದ ಒಂದೇ ವಾರದಲ್ಲಿ ವಿದ್ಯುತ್ ಸಂಪರ್ಕ ನೀಡಿ ನೀರು ಪೂರೈಕೆ ಆರಂಭಿಸಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

ಕುಡಿಯುವ ನೀರಿನ ವಿಚಾರದಲ್ಲಿ ವಿಳಂಬವಾದರೆ ಸಹಿಸುವುದಿಲ್ಲ. ಡಿಸಿ ಖಾತೆಯಲ್ಲಿ ಹಣ ಇದೆ. ನೀರಿನ ಸಮಸ್ಯೆಗೆ ಹಣದ ಕೊರತೆ ಕಾರಣವಲ್ಲ. ಕೆಲಸ ಮಾಡದಿದ್ದರೆ ಕ್ರಮ ಅನಿವಾರ್ಯ ಎಂದು ಎಚ್ಚಸಿದರು.

ಜಾನುವಾರುಗಳಿಗೆ ಸದ್ಯ ಮೇವಿನ ಸಮಸ್ಯೆ ಇಲ್ಲ ಎಂದು ಪಶು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಬೇಸಿಗೆಯಲ್ಲಿ ಪಶು ಇಲಾಖೆ ಹಾಗೂ ಕೆಎಂಎಫ್ ಸಹಕಾರದಿಂದ ಉಚಿತ ಮೇವು ಕಿಟ್ ವಿತರಿಸಬೇಕು. ಲಸಿಕೆ ಕಾರ್ಯವೂ ನಿರಂತರವಾಗಿರಬೇಕು ಎಂದು ಎಚ್ಚರಿಸಿದರು.

ನಿವೇಶನ ಹಂಚಿಕೆ ವಿಳಂಬಕ್ಕೆ ಅಸಮಾಧಾನ: ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ವಿಷಯದಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ, ಸರ್ಕಾರಿ ಜಾಗ ಇದ್ದರೂ ಅಭಿವೃದ್ಧಿ ಆಗಿಲ್ಲ. ದೇವನಹಳ್ಳಿಯಲ್ಲಿ 15 ದಿನಗಳಲ್ಲಿ 1,000 ಸೈಟ್ ನೀಡಬೇಕು. ಕಾಗದದ ಕೆಲಸದಲ್ಲಿ ಸಿಲುಕಿಸಬೇಡಿ’ ಎಂದು ಹೇಳಿದರು.

ಅಧಿಕಾರಿಗಳಿಗೆ ತರಾಟೆ: ಜಲಜೀವನ ಮಿಷನ್ ಕಾಮಗಾರಿಯಿಂದ ಹಳ್ಳಿಗಳಲ್ಲಿ ರಸ್ತೆ ಹಾಳಾಗಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ಗುಂಡಿ ತೆಗೆದು ತಿಂಗಳುಗಟ್ಟಲೆ ಹಾಗೇ ಬಿಟ್ಟರೆ ಜನ ಶಪಿಸೋದಿಲ್ಲವೇ?' ಎಂದು ಪ್ರಶ್ನಿಸಿದರು. 15 ದಿನಗಳಲ್ಲಿ ಎಲ್ಲಾ ಗುಂಡಿ ಮುಚ್ಚಬೇಕು ಎಂದು ಸೂಚಿಸಿದರು.

ಇಂದಿರಾ ಕಿಟ್, ಬೆಂಬಲ ಬೆಲೆ: ಇಂದಿರಾ ಕಿಟ್ ವಿತರಣೆಯಲ್ಲಿ ವಿಳಂಬ ಆಗಬಾರದು. ಜನವರಿ ಅಂತ್ಯ ಅಥವಾ ಫೆಬ್ರವರಿಯಲ್ಲಿ ಪಡಿತರ ಅಕ್ಕಿಯೊಂದಿಗೆ ವಿತರಣೆ ಆರಂಭಿಸಬೇಕು. ಬೆಂಬಲ ಬೆಲೆ ಯೋಜನೆಯಡಿ ರಾಗಿ ನೋಂದಣಿಗೆ ಬಾಕಿ ಇರುವ ರೈತರ ವಿಷಯವನ್ನು ಎಳೆದಾಡದೆ ತ್ವರಿತ ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದರು.

ಪೋಡಿ ದುರಸ್ತಿ, ಸಾರ್ವಜನಿಕ ಸಂಪರ್ಕ: ಪಹಣಿ ಇಲ್ಲ, ಖಾತೆ ಇಲ್ಲ, ಹದ್ದುಬಸ್ತು ಇಲ್ಲ ಎಂದು ರೈತರು ಅಲೆದಾಡುತ್ತಿದ್ದಾರೆ. ಜಿಲ್ಲೆಯು ಪೋಡಿ ದುರಸ್ತಿಯಲ್ಲಿ 10ನೇ ಸ್ಥಾನದಲ್ಲಿದೆ. ಕೆಲಸ ವೇಗವಾಗಿ ಮುಗಿಯಬೇಕು. 2026ರೊಳಗೆ ಸ್ಪಷ್ಟ ಫಲಿತಾಂಶ ಕಾಣಬೇಕು ಎಂದರು.

ತಹಶೀಲ್ದಾರರು ಹಾಗೂ ಅಧಿಕಾರಿಗಳ ವಿರುದ್ಧ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ, ಕಚೇರಿಗೆ ಬಂದ ಜನರನ್ನು ಗೌರವದಿಂದ ಮಾತನಾಡಿಸಿ, ತಹಶೀಲ್ದಾರರು ವಾರಕ್ಕೆ ಕನಿಷ್ಠ ಎರಡು ದಿನ ಸೋಮವಾರ ಮತ್ತು ಗುರುವಾರ ಕಡ್ಡಾಯವಾಗಿ ಸಾರ್ವಜನಿಕರ ಸಂಪರ್ಕಕ್ಕೆ ಸಿಗಬೇಕು ಎಂದು ಆದೇಶಿಸಿದರು.

ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಸೂರಜ್ ಎಂ ಹೆಗಡೆ, ಜಿಲ್ಲಾಧ್ಯಕ್ಷ ರಾಜಣ್ಣ, ಬಯಪ ಅಧ್ಯಕ್ಷ ವಿ. ಶಾಂತಕುಮಾರ್, ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಸಿಇಒ ಕೆ.ಎನ್ ಅನುರಾಧ, ಎಸ್ಪಿ ಚಂದ್ರಕಾಂತ್, ಸಚಿವರ ಆಪ್ತ ಕಾರ್ಯದರ್ಶಿ ನಟರಾಜ್, ಬಯಪ್ಪ ಸದಸ್ಯ ವಿ.ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.

ಅಧಿಕಾರಿಗಳ ವಿರುದ್ಧ ಶಾಸಕ ದೂರು

ಸೆಪ್ಟೆಂಬರ್ನಲ್ಲಿ ದೊಡ್ಡಬಳ್ಳಾಪುರದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಉದ್ಘಾಟನೆ ಮಾಡಲಾಗಿದೆ. ಆದರೆ ಇಂದಿಗೂ ಬೀಗವೇ ತೆರೆಯಲಾಗಿಲ್ಲ. ಅಧಿಕಾರಿಗಳು ಕಚೇರಿಗೆ ಬಂದಿಲ್ಲ. ಕಚೇರಿ ಇದ್ದರೂ ಕೆಲಸಕ್ಕೆ ಬರಲು ಅಧಿಕಾರಿಗಳು ಹಿಂದೆಟ್ಟು ಹಾಕುತ್ತಿದ್ದಾರೆ. ಜನಪ್ರತಿನಿಧಿಗಳಾಗಿ ಪ್ರಶ್ನಿಸಿದರೂ ಉತ್ತರ ಸಿಗುತ್ತಿಲ್ಲ ಎಂದು ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮುತ್ತೂರಿನಲ್ಲಿ ಗಣೇಶ ಮೆರವಣಿಗೆಯ ವೇಳೆ ನಡೆದ ಪಟಾಕಿ ಅವಘಡದಲ್ಲಿ ಮೃತಪಟ್ಟ ಯುವಕರ ಕುಟುಂಬಗಳಿಗೆ ಇದುವರೆಗೂ ಯಾವುದೇ ಪರಿಹಾರ ಸಿಕ್ಕಿಲ್ಲ. ಅಲ್ಲದೆ ತಪ್ಪಿತಸ್ಥರ ವಿರುದ್ಧವೂ ಯಾವುದೇ ಕಾನೂನು ಕ್ರಮ ಜರುಗಿಲ್ಲ ಎಂದು ಶಾಸಕರು ನೋವಿನಿಂದ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಚಂದ್ರಕಾಂತ್ ಪ್ರಕರಣವನ್ನು ಖುದ್ದಾಗಿ ಪರಿಶೀಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸಮಸ್ಯೆ ಕಾಣುತ್ತಿಲ್ಲ ನೆಲಮಂಗಲ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರೇ ಇಲ್ಲ. ತ್ಯಾಮಗೊಂಡ್ಲು ಆರೋಗ್ಯ ಕೇಂದ್ರದಲ್ಲಿ ಮೂರು ತಿಂಗಳಿಗೂ ಹೆಚ್ಚು ಕಾಲ ಅಂಬುಲೆನ್ಸ್ ಇಲ್ಲದೆ ರೋಗಿಗಳು ಪರದಾಡಿದರು. ಜನರ ನೋವು ನಮಗೆ ಕಾಣುತ್ತದೆ. ಆದರೆ ಅಧಿಕಾರಿಗಳಿಗೆ ಕಾಣುವುದಿಲ್ಲ. ನಾನು ಖುದ್ದಾಗಿ ಸಂಪರ್ಕಿಸಿದ ಬಳಿಕ ಮಾತ್ರ ಆಂಬುಲೆನ್ಸ್ ಸೇವೆ ಸರಿಪಡಿಸಲಾಗಿದೆ. ಅಧಿಕಾರಿಗಳು ಕೆಲಸ ಮಾಡಿದ್ದರೆ ಜನಪ್ರತಿನಿಧಿಗಳನ್ನೆ ಜನರು ದೂಷಣೆ ಮಾಡುತ್ತಾರೆ. ನೆಲಮಂಗಲದಲ್ಲಿ 31 ವಾರ್ಡ್ಗಳಿದ್ದು ಕನಿಷ್ಠ 15 ನ್ಯಾಯಬೆಲೆ ಅಂಗಡಿಗಳ ಅಗತ್ಯವಿದೆ ಸಚಿವರು ತಕ್ಷಣ ಕ್ರಮ ಕೈಗೊಳ್ಳುವಂತೆ ನೆಲಮಂಗಲ ಶಾಸಕ ಎಸ್. ಶ್ರೀನಿವಾಸ್ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.