ಬಯಲು ಸೀಮೆಗೆ ಎತ್ತಿನಹೊಳೆ ಮೊದಲ ಶಾಶ್ವತ ಯೋಜನೆ

7
ಕೆಲವೇ ವರ್ಷದಲ್ಲಿ ಕೆರೆಗಳಿಗೆ ನೀರು

ಬಯಲು ಸೀಮೆಗೆ ಎತ್ತಿನಹೊಳೆ ಮೊದಲ ಶಾಶ್ವತ ಯೋಜನೆ

Published:
Updated:
Prajavani

ದೇವನಹಳ್ಳಿ: ರಾಜ್ಯದ ಇತಿಹಾಸದಲ್ಲಿ ಬಯಲು ಸೀಮೆಗೆ ಎತ್ತಿನಹೊಳೆ ಮೊದಲ ಶಾಶ್ವತ ಯೋಜನೆಯಾಗಿದೆ ಎಂದು ವಿಜಯಪುರ ಹೋಬಳಿ ಕಾಂಗ್ರೆಸ್ ಎಸ್ಸಿ ಘಟಕ ಅಧ್ಯಕ್ಷ ವಿ.ನಾರಾಯಣಸ್ವಾಮಿ ತಿಳಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಕಾಂಗ್ರೆಸ್ ಪರಿಶಿಷ್ಟ ಘಟಕ ಪದಾಧಿಕಾರಿಗಳಿಂದ ನಡೆದ ಜಿಲ್ಲಾ ಮಟ್ಟದ ಸಮಾವೇಶ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಎತ್ತಿನ ಹೊಳೆ ಯೋಜನೆಗೆ 8 ರಿಂದ 10ವರ್ಷಬೇಕು ಎಂಬುದರಲ್ಲಿ ಅರ್ಥವಿಲ್ಲ. ಕೆಲ ವಿರೋಧಿಗಳು ತಪ್ಪು ಮಾಹಿತಿಯಿಂದ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದ್ದಾರೆ. 2 ರಿಂದ 3ವರ್ಷಕ್ಕೆ ಗ್ರಾಮಾಂತರ ಜಿಲ್ಲೆ ಕೆರೆಗಳಿಗೆ ನೀರು ಹರಿಯುವುದರಲ್ಲಿ ಸಂಶಯವಿಲ್ಲ ಎಂದರು.

ಸಿದ್ದರಾಮಯ್ಯರ ಆಡಳಿತವಧಿಯಲ್ಲಿ ರೈತರ 50 ಸಾವಿರದವರೆಗಿನ ಸಾಲಮನ್ನಾವಾಗಿದೆ, ಕಾಂಗ್ರೆಸ್‌ನಿಂದ ಮಾತ್ರ ದಲಿತರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ ಎಂದರು .‌

ಕೆ.ಪಿ.ಸಿ.ಸಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಎಂ.ನಾರಾಯಣಸ್ವಾಮಿ ಎಸ್ಸಿ ಘಟಕದ ರಾಜ್ಯ ಸಂಚಾಲಕ ಪ್ರಕಾಶ್ ಮಾತನಾಡಿ, ಯು.ಪಿ.ಎ. ಸರ್ಕಾರ ರೈತರಿಗೆ ₹72 ಸಾವಿರ ಕೋಟಿ ಸಾಲಮನ್ನಾ ಮಾಡಿತ್ತು. ರಾಜ್ಯ ಸರ್ಕಾರದ ಈ ಹಿಂದಿನ ಐದು ವರ್ಷದ ಆಡಳಿತದಲ್ಲಿ ಪ್ರಗತಿಪರ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಮತಗಳಿಸಿದರೂ ಸ್ಥಳೀಯ ಪುರಸಭೆ ಚುನಾವಣೆಯಲ್ಲಿ ಕಡಿಮೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಚುನಾವಣೆಗೆ ಮೊದಲೇ ಸಿದ್ಧತೆ ಮಾಡಿಕೊಳ್ಳಬೇಕು. ಪ್ರತಿಯೊಂದು ಕಾಂಗ್ರೆಸ್ ಘಟಕದ ಪದಾಧಿಕಾರಿಗಳು ಬೂತ್ ಮಟ್ಟದಿಂದ ಕಾರ್ಯ ಪ್ರವೃತ್ತರಾಗಬೇಕು.  ಪಂಚರಾಜ್ಯಗಳ ಚುನಾವಣಾ ಫಲಿತಾಂಶದಿಂದ ಕಾಂಗ್ರೆಸ್‌ಗೆ ಅಶಾದಾಯಕವಾಗಿದೆ ಎಂದು ತಿಳಿಸಿದರು.

ಮುಖಂಡ ಬುಳ್ಳಹಳ್ಳಿ ರಾಜಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ ಕುಮಾರ್ ಮಾತನಾಡಿ, ಕಾಂಗ್ರೆಸ್ ದಲಿತರನ್ನು ನೆಚ್ಚಿಕೊಂಡಿದೆ. ಪಕ್ಷಕ್ಕೆ ದಲಿತರೇ ಬೇರುಗಳು. ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಪುರಸಭೆಗೆ ಚುನಾವಣೆ ಸಮೀಪಿಸುತ್ತಿದೆ. ಈ ಚುನಾವಣೆ ಲೋಕಸಭೆ ಚುನಾವಣೆಗೆ ದಿಕ್ಸೂಜಿಯಾಗಲಿದೆ ಎಂದರು.

‌ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕ ಅಧ್ಯಕ್ಷ ಚೌಡಪ್ಪನಹಳ್ಳಿ ಲೋಕೇಶ್ ಮಾತನಾಡಿ, ಈ ಹಿಂದಿನ ಕಾಂಗ್ರೆಸ್ ಆಡಳಿತದಲ್ಲಿ ಸಾವಿರಾರು ಕೋಟಿ ಅನುದಾನ ಪರಿಶಿಷ್ಟರಿಗೆ ನೀಡಿಲಾಗಿದೆ. ಪ್ರವಾಸೋದ್ಯಮ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ನೆರವು ಸಿಗುತ್ತಿದೆ.120 ಅರ್ಹ ಪರಿಶಿಷ್ಟರಿಗೆ ಕೆ.ಎಂ.ಎಫ್ ವತಿಯಿಂದ ಮಿಲ್ಕ್ ಪಾರ್ಲರ್ ವಹಿವಾಟು ನಡೆಸಲು ಚಿಂತನೆ ನಡೆದಿದೆ. ಸಮೃದ್ಧಿ ಯೋಜನೆಯಡಿ ಪರಿಶಿಷ್ಟ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ವ್ಯಾಸಂಗ ಮಾಡಲು ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕ ಅಧ್ಯಕ್ಷ ಡಿ.ವಿ.ಕೃಷ್ಣಮೂರ್ತಿ, ಚಲವಾದಿ ಮುಖಂಡ ಕೆ.ವಿ ಸ್ವಾಮಿ ಮಾತನಾಡಿದರು. ವಿಜಯಪುರ ಹೋಬಳಿ ಕಾಂಗ್ರೆಸ್ ಎಸ್ಸಿ ಘಟಕ ಕಾರ್ಯದರ್ಶಿ ಮುನಿರಾಜು, ಉಪಾಧ್ಯಕ್ಷ ಡೇವಿಡ್ ನಾರಾಯಣಸ್ವಾಮಿ, ಖಾದಿ ಬೋರ್ಡ್ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸ್, ಮುಖಂಡರಾದ ಬಿದಲೂರು ಮುನಿರಾಜು, ಜಯರಾಮ್, ಸೋಮಸೇಖರ್, ತಿಮ್ಮರಾಯಪ್ಪ, ನರಸಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !