‘ಈ ಭಾಗದ ಮಹಿಳೆಯರಲ್ಲೇ ಕ್ಯಾನ್ಸರ್‌ ಹೆಚ್ಚು’

7

‘ಈ ಭಾಗದ ಮಹಿಳೆಯರಲ್ಲೇ ಕ್ಯಾನ್ಸರ್‌ ಹೆಚ್ಚು’

Published:
Updated:
Deccan Herald

ಗಂಟಿಗಾನಹಳ್ಳಿ(ದೊಡ್ಡಬಳ್ಳಾಪುರ): ಪ್ರಾಥಮಿಕ ಹಂತದಲ್ಲೇ ಕ್ಯಾನ್ಸರ್‌ ರೋಗ ಪತ್ತೆ ಮಾಡಿದರೆ ಗುಣಪಡಿಸಲು ಹಾಗೂ ಅದರಿಂದ ಹೆಚ್ಚು ನೋವು ಅನುಭವಿಸುವುದನ್ನು ತಪ್ಪಿಸಬಹುದಾಗಿದೆ ಎಂದು ಬ್ಯಾಪ್ಟಿಸ್ಟ್‌ ಆಸ್ಪತ್ರೆ ಸಮುದಾಯ ಆರೋಗ್ಯ ವಿಭಾಗದ ರಾಜೇಂದ್ರ ಹೇಳಿದರು.

ಅವರು ತಾಲ್ಲೂಕಿನ ಗಂಟಿಗಾನಹಳ್ಳಿ ಗ್ರಾಮದಲ್ಲಿ ಗುರುವಾರ ಬ್ಯಾಪ್ಟಿಸ್ಟ್‌ ಆಸ್ಪತ್ರೆ ಸಮುದಾಯ ಆರೋಗ್ಯ ವಿಭಾಗದ ವತಿಯಿಂದ ನಡೆದ ಆರೋಗ್ಯ ತಪಾಸಣ ಶಿಬಿರದಲ್ಲಿ ಮಾತನಾಡಿದರು.

ಬಾಯಿ, ಬ್ರಸ್ಟ್‌, ಗರ್ಭಕೋಶದ ಕ್ಯಾನ್ಸರ್‌ ಈ ಭಾಗದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ತಂಬಾಕು ಸೇವನೆ ಹೆಚ್ಚಾಗಿರುವುದೇ ಈ ರೀತಿಯ ಕ್ಯಾನ್ಸರ್‌ ಹರಡಲು ಕಾರಣವಾಗಿದೆ. 30ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿಯೇ ಕ್ಯಾನ್ಸರ್‌ ಹೆಚ್ಚು. ಗ್ರಾಮದಲ್ಲಿಯೇ ಆಧುನಿಕ ಯಂತ್ರದ ಮೂಲಕ ತಪಾಸಣೆ ನಡೆಸಲಾಗುವುದು. ರೋಗದ ಲಕ್ಷಣಗಳು ಕಂಡು ಬಂದರೆ ಹೆಚ್ಚಿನ ತಪಾಸಣೆ ಮಾಡಲಾಗುವುದು. ಕ್ಯಾನ್ಸರ್‌ ರೋಗದಿಂದ ಬಳಲುತ್ತಿರುವವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುವುದು ಎಂದರು.

ತಪಾಸಣ ಶಿಬಿರ ಉದ್ಘಾಟಿಸಿ ಮಾತನಾಡಿದ ಶಾಸಕ ನಿಸರ್ಗ ನಾರಾಯಣಸ್ವಾಮಿ, ರೈತ ಸಮುದಾಯ ಕನಿಷ್ಠ ಆರು ತಿಂಗಳಿಗೆ ಒಮ್ಮೆಯಾದರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಅನಾರೋಗ್ಯಕ್ಕೆ ತುತ್ತಾಗುವುದನ್ನು ತಡೆಯಲು ಸಾಧ್ಯ. ಇತ್ತೀಚೆಗೆ ವಿವಿಧ ಸಂಘ ಸಂಸ್ಥೆಗಳು ಉಚಿತವಾಗಿ ಆರೋಗ್ಯ ತಪಾಸಣ ಶಿಬಿರ ನಡೆಸುತ್ತಿವೆ. ಇಂತಹ ಶಿಬಿರಗಳ ತಪಾಸಣೆಯಲ್ಲಿ ಭಾಗವಹಿಸುವಂತೆ ಸಲಹೆ ನೀಡಿದರು.

ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಸ್‌.ಎಲ್‌.ವೆಂಕಟೇಶ್‌ಬಾಬು ಮಾತನಾಡಿ, ಎರಡು ದಿನಗಳ ಕಾಲ ಬ್ಯಾಪ್ಟಿಸ್ಟ್‌ ಆಸ್ಪತ್ರೆ ನುರಿತ ವೈದ್ಯರು ಗ್ರಾಮದಲ್ಲಿಯೇ ಇದ್ದು ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಇದನ್ನು ಗ್ರಾಮದ ಸುತ್ತಲಿನ ಇತರರು ಶಿಬಿರದಲ್ಲಿ ಭಾಗವಹಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಅಪ್ಪಯ್ಯ,ಗ್ರಾಮ ಪಂಚಾಯಿತಿ ಸದಸ್ಯ ಶ್ರೀಧರಮೂರ್ತಿ, ಹರೀಶ್‌, ಜೆಡಿಎಸ್‌ ಜಿಲ್ಲಾ ಯುವ ಘಟಕದ ಕಾರ್ಯದರ್ಶಿ ಗೌರೀಶ್‌, ತೂಬಗೆರೆ ಹೋಬಳಿ ಜೆಡಿಎಸ್‌ ಘಟಕದ ಅಧ್ಯಕ್ಷ ದೇವರಾಜ್‌,ಜಿಲ್ಲಾ ಕಾರ್ಯದರ್ಶಿ ಆರ್‌.ಚಿದಾನಂದ್‌, ವಿಎಸ್‌ಎಸ್‌ಎನ್‌ ಕಾರ್ಯದರ್ಶಿ ಗೋಪಾಲ್‌,ಪ್ರಕಾಶ್‌, ರಾಜಗೋಪಾಲ್‌ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !