ಶನಿವಾರ, ಅಕ್ಟೋಬರ್ 19, 2019
28 °C

ಗುಳ್ಳೆ ನರಿಯಾಗಿದ್ದುಕೊಂಡೇ ಕೆಲಸ ಮಾಡುವೆ: ಎಂಟಿಬಿ ನಾಗರಾಜ್‌

Published:
Updated:
Prajavani

ಹೊಸಕೋಟೆ: ‘ನಾನು ಗುಳ್ಳೆ ನರಿಯಾಗಿದ್ದುಕೊಂಡೇ ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸುವುದಾಗಿ’ ಶಾಸಕ ಎಂಟಿಬಿ ನಾಗರಾಜ್‌, ಶರತ್‌ ಬಚ್ಚೇಗೌಡ ಹೇಳಿಕೆಗೆ ತಿರುಗೇಟು ನೀಡಿದರು.

ತಾಲ್ಲೂಕಿನ ದೊಡ್ಡನಲ್ಲೂರಹಳ್ಳಿ ಗ್ರಾಮದಲ್ಲಿ ₹50ಲಕ್ಷ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

ಈಚೆಗೆ ಬಿಜೆಪಿ ಯುವ ಮುಖಂಡ ಶರತ್ ಬಚ್ಚೇಗೌಡ, ಎಂಟಿಬಿ ನಾಗರಾಜ್ ಗುಳ್ಳೇನರಿ ಇದ್ದಂತೆ ಎಂದು ಜರಿದಿದ್ದರು. ಇದಕ್ಕೆ ಟಾಂಗ್ ನೀಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಿದ್ದರೂ ಅಭಿವೃದ್ಧಿಗೆ ಅನುದಾನ ಸಿಕ್ಕಿರಲಿಲ್ಲ. ಕೇವಲ ಸಂಬಳ ಪಡೆದು ಅಧಿಕಾರ ಅನುಭವಿಸುವುದು ಇಷ್ಟವಿಲ್ಲದೆ ರಾಜೀನಾಮೆ ಕೊಟ್ಟಿದ್ದಾಗಿ ತಿಳಿಸಿದರು.

‘ಕಳೆದ 10ವರ್ಷದಿಂದ ತಾಲ್ಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ನಡೆದಿದೆ. ಮುಂದಿನ ಮೂರೂವರೆ ವರ್ಷದಲ್ಲಿ ಹೆಚ್ಚಿನ ಕೆಲಸ ಮಾಡಲು ಮತ ಹಾಕಿ. ಇದು ನನ್ನ ಕೊನೆ ಚುನಾವಣೆ. ತಾಲ್ಲೂಕಿಗೆ ಕೋಟ್ಯಂತರ ರೂಪಾಯಿ ಯೋಜನೆ ತಂದು ಕೆಲಸ ಮಾಡುವುದಾಗಿ’ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಚೊಕ್ಕಹಳ್ಳಿ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದರು.

Post Comments (+)