ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಗೋಡೆ ಅಲಂಕರಿಸಿ ವರ್ಲಿ ಚಿತ್ರಗಳು

Last Updated 9 ಅಕ್ಟೋಬರ್ 2019, 14:13 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರದ ನೆಲದಾಂಜನೇಯಸ್ವಾಮಿ ದೇವಾಲಯದ ಸಮೀಪ ತಿಗಳರಪೇಟೆ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡದ ಗೋಡೆಗಳಿಗೆ ಯುವ ಸಂಚಲನ ತಂಡದ ವತಿಯಿಂದ ವರ್ಲಿ ಚಿತ್ರ ಬಿಡಿಸುತ್ತಿರುವ ಕೆಲಸವನ್ನು ಕೃಷಿ ಮಾರಾಟ ಇಲಾಖೆ ನಿರ್ದೇಶಕ ಸಿ.ಎಸ್‌.ಕರೀಗೌಡ ಭೇಟಿ ನೀಡಿ ವೀಕ್ಷಣೆ ಮಾಡಿ ಮೆಚ್ಚುಗೆ ಸೂಚಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ಯುವ ಸಂಚಲನ ಅಧ್ಯಕ್ಷ ಚಿದಾನಂದ್‌, ನಗರದ ಅತ್ಯಂತ ಹಳೇಯ ಹಾಗೂ ಪ್ರತಿ ನಿತ್ಯ ಹೆಚ್ಚು ಜನ ಓಡಾಡುವ ಸ್ಥಳದಲ್ಲಿ ಇರುವ ಸರ್ಕಾರಿ ಶಾಲಾ ಕಟ್ಟಡದ ಗೋಡೆಗಳಿಗೆ ವರ್ಲಿ ಕಲಾ ಪ್ರಕಾರದಲ್ಲಿ ಚಿತ್ರಗಳನ್ನು ಬರೆಯಲಾಗುತ್ತಿದೆ. ಇದರಿಂದ ಶಾಲಾ ಕಟ್ಟಡ ಅತ್ಯಂತ ಆಕರ್ಷಕವಾಗಿ ಕಾಣಲಿದೆ. ಇದೇ ಮಾದರಿಯಲ್ಲಿ ಇತರೆ ಶಾಲಾ ಕಟ್ಟಡದ ಗೋಡೆಗಳನ್ನು ಅಲಂಕರಿಸಬೇಕು ಎನ್ನುವ ಉದ್ದೇಶ ನಮ್ಮದು. ಇದಕ್ಕೆ ಸ್ಥಳೀಯರ ಸಹಕಾರ ಅಗತ್ಯವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT