ಆನೇಕಲ್ : ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ವನ್ಯಜೀವಿ ಮತ್ತು ಪ್ರಕೃತಿ ಸಂರಕ್ಷಣೆಗಾಗಿ ಕೆಲಸ ಮಾಡಲು ಯುವಕರು, ವಿದ್ಯಾರ್ಥಿಗಳನ್ನು ಅಣಿಗೊಳಿಸುವ ಉದ್ದೇಶದಿಂದ ಅ.13ರಿಂದ ಝೂ ಕ್ಲಬ್ ಆರಂಭಿಸಲಾಗುತ್ತಿದೆ.
ವಾರದ ಪ್ರತಿ ಭಾನುವಾರ ಝೂ ಕ್ಲಬ್ ಚಟುವಟಿಕೆ ನಡೆಸಲಿದೆ. 10-18 ವರ್ಷದ ಮಕ್ಕಳು ಭಾಗವಹಿಸಲು ಅವಕಾಶವಿದೆ. ವನ್ಯಜೀವಿ ಸಂರಕ್ಷಣೆ, ನಿರ್ವಹಣೆ, ಪೋಷಣೆ, ನಡವಳಿಕೆ, ಜಾಗೃತಿ ಮೂಡಿಸುವುದು, ಕ್ಷೇತ್ರ ಭೇಟಿ, ತಜ್ಞರೊಂದಿಗೆ ಸಮಾಲೋಚನೆ, ಚರ್ಚೆ ಮತ್ತಿತರ ಕಾರ್ಯಕ್ರಮ ನಡೆಯಲಿದೆ.
60 ವಿದ್ಯಾರ್ಥಿಗಳು ಪಾಲ್ಗೊಳ್ಳಲು ಅವಕಾಶವಿದ್ದು ನೊಂದಣಿ ಶುಲ್ಕ ₹1 ಸಾವಿರ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶುಲ್ಕ ಇರುವುದಿಲ್ಲ. ಆಸಕ್ತರು ಅ.6ರೊಳಗೆ ನೋಂದಣಿ ಮಾಡಿಕೊಳ್ಳಬೇಕು.