ಸೋಮವಾರ, ಮಾರ್ಚ್ 8, 2021
25 °C
ಸಾತಾರ ಜಿಲ್ಲೆಯ ಕರಾಡ ತಾಲ್ಲೂಕಿನ ಉಮರಜ್‌ನಲ್ಲಿ ಸಿಲುಕಿರುವ ಜನ

ವಿಜಯಪುರ: ಸಂಕಷ್ಟದಲ್ಲಿ ಬರಗುಡಿ ಕಾರ್ಮಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಹೊಟ್ಟೆ ಪಾಡಿಗಾಗಿ ಮಹಾರಾಷ್ಟ್ರಕ್ಕೆ ಹೋಗಿದ್ದ ಜಿಲ್ಲೆಯ 20 ಜನ ಬಡ ಕಾರ್ಮಿಕರು ಲಾಕ್ ಡೌನ್‌ನಿಂದಾಗಿ ಕೈಯಲ್ಲಿ ಕಾಸಿಲ್ಲದೆ, ಊಟಕ್ಕೂ ಗತಿ ಇಲ್ಲದೇ, ಊರಿಗೂ ಬರಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇಂಡಿ ತಾಲ್ಲೂಕಿನ ಬರಗುಡಿ ಗ್ರಾಮದ ಸುಮಾರು 20 ಜನ ಕೂಲಿ ಕಾರ್ಮಿಕರು ಸಾತಾರ ಜಿಲ್ಲೆಯ ಕರಾಡ ತಾಲ್ಲೂಕಿನ ಉಮರಜ್ ಗ್ರಾಮದಿಂದ ಸುಮಾರು 2 ಕಿ.ಮೀ. ದೂರದ ಪ್ರದೇಶವೊಂದರಲ್ಲಿ ಶೆಡ್‌ನಲ್ಲಿ ತೊಂದರೆಗೆ ಒಳಗಾಗಿದ್ದಾರೆ.

ಆರು ತಿಂಗಳ ಹಿಂದೆ ಮೂವರು ಮಕ್ಕಳು, 15 ಮಹಿಳೆಯರು ಸೇರಿ ಒಟ್ಟು 20 ಜನರು ಕೂಡಿಕೊಂಡು  ಉದ್ಯೋಗ ಅರಸಿ ದೂರದ ಉಮರಜ್‍ಗೆ ಹೋಗಿದ್ದರು. ಪ್ರಾರಂಭದಲ್ಲಿ ದುಡಿಮೆಗೆ ತಕ್ಕ ಸಂಬಳ ಪಡೆದು ಇವರು ಗ್ರಾಮದ ಹೊರ ವಲಯದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಇದರಿಂದಾಗಿ ಇವರಿಗೆ ಯಾವುದೇ ತೋಂದರೆ ಇರಲಿಲ್ಲ.

ಲಾಕ್‌ಡೌನ್ ಘೋಷಣೆಯಾದ ಬಳಿಕ ಸಾರಿಗೆ ಸಂಪರ್ಕ ಇಲ್ಲದ ಕಾರಣ ಊರು ಸೇರಲಾಗದೆ, ಇಟ್ಟಿಗೆ ತಯಾರಿಕೆ ಬಟ್ಟಿಯ ಪಕ್ಕ ಬಿಡಾರ ಹೂಡಿದ ಸ್ಥಳದಲ್ಲೆ ಉಳಿದುಕೊಂಡಿದ್ದರು.

ಪ್ರಾರಂಭದ ದಿನಗಳಲ್ಲಿ ಮಾಲೀಕನು ಅಗತ್ಯ ಸೌಲಭ್ಯ ಒದಗಿಸಿದ್ದರು. ಹಣದ ತೊಂದರೆಯೂ ಆಗಿರಲಿಲ್ಲ, ಆದರೆ, ಕಳೆದ 15 ದಿನಗಳ ಹಿಂದೆ ಇಟ್ಟಿಗೆ ಬಟ್ಟಿ ಮಾಲಲೀಕ ಉಮರಜ್ ಗ್ರಾಮದಲ್ಲೆ ಹೋಂ ಕ್ವಾರಂಟೈನ್‍ಗೆ ಒಳಗಾದ ಕಾರಣ, ಕಾರ್ಮಿಕರು ಕೈಯಲ್ಲಿ ಕಾಸಿಲ್ಲದೆ, ಹೊಟ್ಟೆಗೆ ಹಿಟ್ಟಿಲ್ಲದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಅಂತರರಾಜ್ಯ ಪ್ರಯಾಣಕ್ಕೆ ಆನ್ ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಪಾಸ್ ನಿರೀಕ್ಷೆಯಲ್ಲಿದ್ದರು. ಆದರೆ, ಅಲ್ಲಿನ  ಸರ್ಕಾರ ನಿಮಗೆ ಕರ್ನಾಟಕದವರು ಸೇರಿಸಿಕೊಳ್ಳುವುದಿಲ್ಲ ಎಂದು ಪಾಸ್ ನೀಡದೆ ಅರ್ಜಿ ತಿರಸ್ಕಾರ ಮಾಡಿದೆ ಎಂದು ಇಟ್ಟಿಗೆ ಕಾರ್ಮಿಕ ಬರಗುಡಿ ಗ್ರಾಮದ ನಿವಾಸಿ ಫಕ್ಕೀರಪ್ಪ ಪೂಜಾರಿ ದೂರಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು