ಮೂಲಸೌಲಭ್ಯಗಳಿಲ್ಲದ ಕಾಡುಗೊಲ್ಲರ ಹಟ್ಟಿ

7

ಮೂಲಸೌಲಭ್ಯಗಳಿಲ್ಲದ ಕಾಡುಗೊಲ್ಲರ ಹಟ್ಟಿ

Published:
Updated:
ಚಿಕ್ಕಸೋಲೂರು ಕಾಡುಗೊಲ್ಲರ ಹಟ್ಟಿಯ ಗುಡಿಸಲು ನಿವಾಸಿ ಮಲ್ಲಿಗಮ್ಮ

ಸೋಲೂರು(ಮಾಗಡಿ): ಚಿಕ್ಕಸೋಲೂರು ಕಾಡುಗೊಲ್ಲರ ಹಟ್ಟಿಯ ನಿವಾಸಿಗಳು ಮೂಲಭೂತ ಸವಲತ್ತುಗಳಿಲ್ಲದೆ ಪರಿತಪಿಸುತ್ತಿದ್ದೇವೆ ಎಂದು ಅಜ್ಜಪ್ಪ ಸ್ವಾಮಿ ಪೂಜಾರಿ ಕೃಷ್ಣಯ್ಯ ತಿಳಿಸಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು. ಗೊಲ್ಲರ ಹಟ್ಟಿಯಲ್ಲಿ 60 ಮನೆಗಳಿವೆ. ಹಿಂದೆ ಕೃಷಿ ಸಚಿವರಾಗಿದ್ದ ಎಚ್‌.ಎಂ.ರೇವಣ್ಣ ಬೆಳ್ಳಿ ಬೆಳಕು ಯೋಜನೆಯಡಿ 20 ಮನೆಗಳನ್ನು ಕಟ್ಟಿಸಿಕೊಟ್ಟಿದ್ದನ್ನು ಹೊರತುಪಡಿಸಿದರೆ ಸರ್ಕಾರದಿಂದ 1 ರೂಪಾಯಿ ಸವಲತ್ತು ಸಹ ನೀಡಿಲ್ಲ ಎಂದು ದೂರಿದರು.‌

‘ಚರಂಡಿ ಇಲ್ಲದೆ, ಸೊಳ್ಳೆಗಳ ಕಾಟ ಹೆಚ್ಚಿದ್ದು ಮಕ್ಕಳು ರೋಗರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಚಿಕ್ಕಸೋಲೂರಿನಿಂದ ಗೊಲ್ಲರ ಹಟ್ಟಿಯವರೆಗೆ ರಸ್ತೆಗೆ ಕಳೆದ 12 ವರ್ಷಗಳ ಹಿಂದೆ ಜಲ್ಲಿಕಲ್ಲು ಹಾಕಿದ್ದರು. ಇಂದು ರಸ್ತೆಯ ಮೇಲೆ ಜಲ್ಲಿಕಲ್ಲು ಸಹ ಕಿತ್ತುಹೋಗಿದ್ದು, ಮುಳ್ಳಿನ ಮೇಲೆ ನಡೆದಂತಾಗುತ್ತಿದೆ’ ಎಂದರು.

ಶಾಲೆಗೆ ಹೋಗುವ ಮಕ್ಕಳು ನಿತ್ಯ ಜಲ್ಲಿಕಲ್ಲಿನ ಮೇಲೆ ಬಿದ್ದು ಗಾಯಗೊಂಡಿದ್ದಾರೆ. ರಸ್ತೆಗೆ ಡಾಂಬರೀಕರಣ ಮಾಡಿಸಿ, ಚರಂಡಿ ಮಾಡಿಸಿಕೊಟ್ಟು ನಮಗೆ ಮೂಲಭೂತ ಸವಲತ್ತುಗಳನ್ನು ನೀಡುವಂತೆ ಶಾಸಕ ಡಾ.ಶ್ರೀನಿವಾಸ ಮೂರ್ತಿ ಮತ್ತು ಸಂಸದ ಡಾ.ಎಂ.ವೀರಪ್ಪ ಮೊಯಿಲಿ ಅವರಲ್ಲಿ ಮನವಿ ಮಾಡಿರುವುದಾಗಿ ಎಂದು ಪೂಜಾರಿ ತಿಳಿಸಿದರು.

ನಮಗೆ ಸ್ವಂತ ಮನೆ ಇಲ್ಲ, ಗುಡಿಸಿಲಿನಲ್ಲಿ ವಾಸವಾಗಿದ್ದೇವೆ. ಸರ್ಕಾರದಿಂದ ಮನೆ ಕಟ್ಟಿಸಿಕೊಡಬೇಕು ಎಂದು ಗುಡಿಸಲು ವಾಸಿ ಮಲ್ಲಿಗಮ್ಮ ಮನವಿ ಮಾಡಿದರು. ಅರೆ ಅಲೆಮಾರಿಗಳಾದ ಕಾಡುಗೊಲ್ಲರಿಗೆ ಸರ್ಕಾರ ವಿಶೇಷ ಸವಲತ್ತುಗಳನ್ನು ನೀಡಿದೆ. ಆದರೆ ಸ್ಥಳೀಯರು ನಮಗೆ ಯಾವುದೇ ಸವಲತ್ತುಗಳನ್ನು ನೀಡಿಲ್ಲ ಎಂದು ಧನಂಜಯ ತಿಳಿಸಿದರು.

ಪ್ರಿಯಾಂಕ, ಪ್ರಜ್ವಲ್‌, ಯಶೋಧ, ಮೋಹನ್‌ ಕುಮಾರ್‌, ಅಂಜು, ದರ್ಶನ್‌, ಚಿತ್ರಲಿಂಗ ಚರಂಡಿ ಮಾಡಿಸಿ, ಸೊಳ್ಳೆಗಳಿಂದ ಮುಕ್ತಿ ದೊರಕಿಸಿ ಕೊಡುವಂತೆ ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !