ನಾಳೆಯಿಂದ ಶ್ರಾವಣ ವಿಶೇಷ ಕಾರ್ಯಕ್ರಮ

7

ನಾಳೆಯಿಂದ ಶ್ರಾವಣ ವಿಶೇಷ ಕಾರ್ಯಕ್ರಮ

Published:
Updated:

ಶಿವಮೊಗ್ಗ: ಬೆಕ್ಕಿನಕಲ್ಮಠದ ವತಿಯಿಂದ ಆ. 12ರಿಂದ ಸೆ.24ರವರೆಗೆ ಪ್ರತಿದಿನ ಸಂಜೆ 6.30ರಿಂದ 8.30ರವರೆಗೆ ಶ್ರಾವಣ ಮಾಸದ ವಿಶೇಷ ಕಾರ್ಯಕ್ರಮ ನಗರದ ವಿವಿಧೆಡೆ ಹಮ್ಮಿಕೊಳ್ಳಲಾಗಿದೆ.

ಪ್ರತಿದಿನ ಸಂಜೆ 6.30ರಿಂದ 8.30ರವರೆಗೆ ಶರಣರ ಮೌಲಿಕ ಚಿಂತನೆ ಉಪನ್ಯಾಸ ಮಾಲಿಕೆ, ಶರಣರ ಜೀವನ ದರ್ಶನ, ಮನೆಮನಗಳಲ್ಲಿ ಶ್ರಾವಣ ಚಿಂತನ-2018 ಅಡಿಯಲ್ಲಿ ವಚನ ಸಂಗೀತ, ಉಪನ್ಯಾಸ, ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದು ಶಿಕ್ಷಕ ಕರಿಬಸವಯ್ಯ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

12ರ ಸಂಜೆ 6.30ಕ್ಕೆ ಶ್ರೀ ಬೆಕ್ಕಿನ ಕಲ್ಮಠದ ಗುರುಬಸವ ಭವನದಲ್ಲಿ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಬಸವ ಕೇಂದ್ರದ ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ, ಕುವೆಂಪು ವಿವಿ ಕುಲಸಚಿವ ಡಾ.ಬೋಜಾನಾಯ್ಕ ಉಪಸ್ಥಿತರಿರುವರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಬಸವರಾಜ ಸಾದರ ಪ್ರಧಾನ ಉಪನ್ಯಾಸ ನೀಡಲಿದ್ದಾರೆ. ಸಂಗೀತ ಶಿಕ್ಷಕ ನಾಗಭೂಷಣ ಹೆಗ್ಡೆ ವಚನ ಸಂಗೀತ ಗಾಯ ನ ಮಾಡಲಿದ್ದಾರೆ ಎಂದರು. 

ಶ್ರಾವಣ ಚಿಂತನ ಅಂಗವಾಗಿ 13ರಿಂದ ಸೆ.8ರವರೆಗೆ ಪ್ರತಿದಿನ ಸಂಜೆ 6.30ರಿಂದ 8.30ರವರೆಗೆ ವಿವಿದೆಡೆ ವಚನ ಸಂಗೀತ, ಉಪನ್ಯಾಸ ಹಾಗೂ ಶ್ರೀಗಳಿಂದ ಆಶೀರ್ವಚನ ನಡೆಯಲಿದೆ. ಆ.26ರಂದು 465ನೇ ಮಾಸಿಕ ಶಿವಾನುಭವ ಗೋಷ್ಠಿ ಸರೋಜಮ್ಮ ಮತ್ತು ನಾಗರಾಜು ಇವರ ನವುಲೆಯ ಬಸವನ ಬೀದಿಯಲ್ಲಿರುವ ನಿವಾಸದಲ್ಲಿ ನಡೆಯಲಿದೆ. ನಿವೃತ್ತ ಪ್ರಾಧ್ಯಾಪಕ ಪ್ರೊ.ಬಸವರಾಜ ನಲ್ಲಿಸರ ‘ತುರಗಾಯಿ ರಾಮಣ್ಣ' ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದು ವಿವರ ನೀಡಿದರು.

ಸೆ. 9ರಿಂದ ಸೆ. 23ರವರೆಗೆ ಮಠದ ವಿದ್ಯಾಸಂಸ್ಥೆಗಳಲ್ಲಿ ಶ್ರಾವಣ ಚಿಂತನಾ ಕಾರ್ಯಕ್ರಮ ನಡೆಯಲಿದೆ. ಸೆ. 24 ರಂದು ಸಂಜೆ 6.30ಕ್ಕೆ ಬೆಕ್ಕಿನ ಕಲ್ಮಠ ಸಭಾಂಗಣದಲ್ಲಿ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಶಾಂತವೀರಪ್ಪ, ಮಂಜುನಾಥ ಸ್ವಾಮಿ, ಸುನಿಲ್ ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !