ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕೋಡಿ: 25 ಕಾಳಜಿ ಕೇಂದ್ರಗಳಲ್ಲಿ 1,783 ಕುಟುಂಬ ಆಶ್ರಯ

Published 5 ಆಗಸ್ಟ್ 2024, 15:43 IST
Last Updated 5 ಆಗಸ್ಟ್ 2024, 15:43 IST
ಅಕ್ಷರ ಗಾತ್ರ

ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶ ವ್ಯಾಪ್ತಿಯ ಕೃಷ್ಣಾ ಹಾಗೂ ಉಪನದಿಗಳ ಜಲಾನಯನ ಪ್ರದೇಶದಲ್ಲಿ ಮಳೆ ಬೀಳುವ ಪ್ರಮಾಣ ಕಡಿಮೆಯಾಗಿದ್ದರಿಂದ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ನದಿಗಳಲ್ಲಿ ನೀರಿನ ಹರಿವು ಇಳಿಮುಖವಾಗುತ್ತಿದೆ.

ಮಹಾ ಮಳೆಯ ಪರಿಣಾಮವಾಗಿ ಕೊಲ್ಹಾಪುರದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿರುವ ರಾಜಾಪೂರೆ ಬ್ಯಾರೇಜ್‌ನಿಂದ 23,2866 ಕ್ಯುಸೆಕ್ ಹೊರ ಹರಿವು ಇದ್ದು, ಕಲ್ಲೋಳ ಬಳಿಯ ಕೃಷ್ಣಾ ನದಿ ಸಂಗಮ ಸ್ಥಳದಲ್ಲಿ ದೂಧಗಂಗಾ ನದಿಗೆ 45,050 ಕ್ಯುಸೆಕ್ ನೀರು ಒಳ ಹರಿವು ಇದೆ. ತಾಲ್ಲೂಕಿನ ಕಲ್ಲೋಳ-ಯಡೂರ ಬ್ಯಾರೇಜ್ ಬಳಿಯಲ್ಲಿ ಕೃಷ್ಣಾ ನದಿಗೆ 27,7916 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಕೃಷ್ಣಾ ನದಿಗೆ ಅಡ್ಡಲಾಗಿರುವ ಹಿಪ್ಪರಗಿ ಬ್ಯಾರೇಜ್‌ನಿಂದ 28,9105 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.

ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಮುಳುಗಡೆಯಾಗಿರುವ 10ಕ್ಕೂ ಹೆಚ್ಚು ಸೇತುವೆಗಳು ಸಂಚಾರಕ್ಕೆ ಇದುವರೆಗೆ ಮುಕ್ತವಾಗಿಲ್ಲ. ಕೃಷ್ಣಾ, ದೂಧಗಂಗಾ, ವೇದಗಂಗಾ ನದಿ ತೀರದಲ್ಲಿ ದೇವಸ್ಥಾನಗಳು ಕಳೆದ ಎರಡು ವಾರದಿಂದ ಜಲಾವೃತಗೊಂಡ ಸ್ಥಿತಿಯಲ್ಲಿಯೇ ಇವೆ.

ಅಥಣಿ ತಾಲ್ಲೂಕು ವ್ಯಾಪ್ತಿಯ 16 ಕಾಳಜಿ ಕೇಂದ್ರಗಳಲ್ಲಿ 1,466 ಕುಟುಂಬಗಳು, ಕಾಗವಾಡ ತಾಲ್ಲೂಕು ವ್ಯಾಪ್ತಿಯ 4 ಕಾಳಜಿ ಕೇಂದ್ರಗಳಲ್ಲಿ 174 ಕುಟುಂಬಗಳು, ಚಿಕ್ಕೋಡಿ ತಾಲ್ಲೂಕು ವ್ಯಾಪ್ತಿಯ 1 ಕಾಳಜಿ ಕೇಂದ್ರದಲ್ಲಿ 25 ಕುಟುಂಬಗಳು, ರಾಯಬಾಗ ತಾಲ್ಲೂಕು ವ್ಯಾಪ್ತಿಯ 4 ಕಾಳಜಿ ಕೇಂದ್ರಗಳಲ್ಲಿ 118 ಕುಟುಂಬಗಳು ಸೇರಿದಂತೆ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ 25 ಕಾಳಜಿ ಕೇಂದ್ರಗಳಲ್ಲಿ 1,783 ಕುಟುಂಬಗಳು ಆಶ್ರಯ ಪಡೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT