58 ವಾರ್ಡ್‌ಗಳಲ್ಲಿ ಮಹಿಳಾ ಮೀಸಲು 28

5
ನಗರಪಾಲಿಕೆ: ಕರಡು ಪಟ್ಟಿ ಪ್ರಕಟ, ಆಕ್ಷೇಪಣೆಗೆ ಅವಕಾಶ

58 ವಾರ್ಡ್‌ಗಳಲ್ಲಿ ಮಹಿಳಾ ಮೀಸಲು 28

Published:
Updated:
ಬೆಳಗಾವಿ ನಗರಪಾಲಿಕೆ ಮುಖ್ಯ ಕಟ್ಟಡದ ನೋಟ

ಬೆಳಗಾವಿ: ನಗರಪಾಲಿಕೆಯ 58 ವಾರ್ಡ್‌ಗಳ ಮೀಸಲಾತಿ ನಿಗದಿಪಡಿಸಿ, ನಗರಾಭಿವೃದ್ಧಿ ಇಲಾಖೆಯು ಕರಡು ಪಟ್ಟಿ ಪ್ರಕಟಿಸಿದೆ.

ಈಚೆಗಷ್ಟೇ ವಾರ್ಡ್‌ಗಳಲ್ಲಿನ ಕ್ಷೇತ್ರಗಳ ಪುನರ್ ವಿಂಗಡಣೆ ಪ್ರಕ್ರಿಯೆ ನಡೆಸಲಾಗಿದೆ. ವಾರ್ಡ್‌ವಾರು ಮೀಸಲಾತಿ ಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ 7 ದಿನಗಳ ಒಳಗೆ ಲಿಖಿತವಾಗಿ, ಕಾರಣಸಹಿತ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

2011ರ ಜನಗಣತಿ ಆಧಾರದ ಮೇಲೆ ಕ್ಷೇತ್ರಗಳ ಪುನರ್‌ವಿಂಗಡಣೆ ಮಾಡಲಾಗಿದೆ. ಸಾಮಾನ್ಯ ವರ್ಗಕ್ಕೆ 16, ಹಿಂದುಳಿದ ವರ್ಗ ‘ಎ‘ಗೆ 15, ಹಿಂದುಳಿದ ವರ್ಗ ‘ಬಿ’ಗೆ 4, ಪರಿಶಿಷ್ಟ ಜಾತಿಗೆ 5, ಪರಿಶಿಷ್ಟ ಪಂಗಡಕ್ಕೆ 2 ಸ್ಥಾನಗಳನ್ನು ಮೀಸಲಿಡಲಾಗಿದೆ.

58 ವಾರ್ಡ್‌ಗಳಲ್ಲಿ 28 ವಾರ್ಡ್‌ಗಳು ಮಹಿಳೆಯರಿಗೆ ಮೀಸಲಾಗಿವೆ. ಈ ಪೈಕಿ 16 ಸ್ಥಾನಗಳು ಸಾಮಾನ್ಯ ವರ್ಗದ ಮಹಿಳೆಯರಿಗೆ ಮೀಸಲಾಗಿವೆ! ಪರಿಶಿಷ್ಟ ಜಾತಿ ಮಹಿಳೆ– 2, ಪರಿಶಿಷ್ಟ ಪಂಗಡ ಮಹಿಳೆಗೆ ಒಂದು ಸ್ಥಾನ ನಿಗದಿಪಡಿಸಲಾಗಿದೆ.

ಹಾಲಿ ಸದಸ್ಯರ ಅಧಿಕಾರದ ಅವಧಿ ಆರು ತಿಂಗಳು ಇದೆ.

Tags: 

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !