ಖುದ್ದು ಹಾಜರಾಗಲು ರಮೇಶಗೆ ಎರಡನೇ ಬಾರಿಗೆ ಅವಕಾಶ:

7

ಖುದ್ದು ಹಾಜರಾಗಲು ರಮೇಶಗೆ ಎರಡನೇ ಬಾರಿಗೆ ಅವಕಾಶ:

Published:
Updated:

ಬೆಳಗಾವಿ: ‘ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗಿದ್ದ ರಮೇಶ ಜಾರಕಿಹೊಳಿ ಅವರಿಗೆ ಪಕ್ಷದ ವರಿಷ್ಠರು ಮತ್ತೆ ನೋಟಿಸ್‌ ನೀಡಿದ್ದು, ಖುದ್ದು ಹಾಜರಾರುವಂತೆ ಸೂಚಿಸಿದ್ದಾರೆ. ಹಾಜರಾಗದಿದ್ದರೆ ಪಕ್ಷ ತೀರ್ಮಾನ ಕೈಗೊಳ್ಳಬಹುದು’ ಎಂದು  ಅರಣ್ಯ ಸಚಿವ, ಸಹೋದರ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಶಾಸಕಾಂಗ ಪಕ್ಷದ ಸಭೆಗೆ ನಾಲ್ಕು ಜನ ಶಾಸಕರು ಗೈರು ಹಾಜರಾಗಿದ್ದರು. ಖುದ್ದು ಹಾಜರಾಗುವಂತೆ ಇವರಿಗೆ ಎರಡನೇ ಬಾರಿಗೆ ಅವಕಾಶ ನೀಡಲಾಗಿದೆ. ತಮ್ಮ ಸಮಸ್ಯೆಯ ಬಗ್ಗೆ ಹೇಳಿಕೊಂಡರೆ ಪರಿಹಾರ ಆಗಬಹುದು. ಇಲ್ಲದಿದ್ದರೆ ಪಕ್ಷ ತನ್ನದೇ ಆದ ತೀರ್ಮಾನ ಕೈಗೊಳ್ಳುತ್ತದೆ’ ಎಂದು ಹೇಳಿದರು.

ಬಜೆಟ್‌ ಮಂಡಿಸುತ್ತಾರೆ:

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಖಂಡಿತವಾಗಿಯೂ ಬಜೆಟ್‌ ಮಂಡಿಸಲಿದ್ದಾರೆ. ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !