ಕೆಲಸಗಾರನನ್ನು ಥಳಿಸಿ ಎಮ್ಮೆಗಳ ಕಳವು: ಮೂವರ ಬಂಧನ

ಮಂಗಳವಾರ, ಜೂನ್ 25, 2019
22 °C

ಕೆಲಸಗಾರನನ್ನು ಥಳಿಸಿ ಎಮ್ಮೆಗಳ ಕಳವು: ಮೂವರ ಬಂಧನ

Published:
Updated:

ಬೆಳಗಾವಿ: ತಾಲ್ಲೂಕಿನ ಅಗಸಗಾ ಗ್ರಾಮದ ಹೊರವಲಯದಲ್ಲಿ ಮೇ 26ರಂದು ರಾತ್ರಿ ದನದ ಶೆಡ್‌ನಲ್ಲಿ ಮಲಗಿದ್ದ ಕೆಲಸಗಾರನ ಕೈಕಾಲು ಕಟ್ಟಿ, ಹಲ್ಲೆ ನಡೆಸಿ ಎಮ್ಮೆಗಳನ್ನು ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಕಾಕತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅವರಿಂದ ಎರಡು ಎಮ್ಮೆಗಳನ್ನು ವಶಕ್ಕೆ ಪಡೆಯಲಾಗಿದೆ.

ಮಣ್ಣೀಕೇರಿಯ ಶೆಟ್ಟು ರಾಮಾ ಸನದಿ, ವಿಶಾಲ ವಿಷ್ಣು ಕಲಕಾಂಬರ ಹಾಗೂ ಸಂತೋಷ ಭರಮಾ ಖಜಗೋನಟ್ಟಿ ಬಂಧಿತರು.

ಅಪ್ಪಯ್ಯ ಮಲ್ಲಪ್ಪ ಶೆಲಾರ ಹಲ್ಲೆಗೊಳಗಾದವರು. ಈ ಕುರಿತು ಶೆಡ್‌ನ ಮಾಲೀಕರಾದ ಪ್ರಿಯಾ ಪುಂಡಲೀಕ ಸೋಮನಟ್ಟಿ ದೂರು ನೀಡಿದ್ದರು. ಎಸಿಪಿ ಕೆ. ಶಿವಾರೆಡ್ಡಿ ಹಾಗೂ ಇನ್‌ಸ್ಪೆಕ್ಟರ್‌ ಎಲ್.ಎಚ್. ಗೌಂಡಿ ನೇತೃತ್ವದಲ್ಲಿ ತನಿಖೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ, ಕೇದನೂರ ಗ್ರಾಮದ ಅನಿಲ ರಾಜು ಗುಡಗ್ಯಾನಟ್ಟಿ ಪರಾಯಿಯಾಗಿದ್ದು, ಆತನ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್‌ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !