ಬುಧವಾರ, ನವೆಂಬರ್ 13, 2019
24 °C

ವಿಶ್ವವಿದ್ಯಾಲಯಗಳ ಗುಣಮಟ್ಟ ಮೌಲ್ಯಮಾಪನ | ಆರ್‌ಸಿಯುಗೆ ‘3 ಸ್ಟಾರ್’ ರೇಟಿಂಗ್

Published:
Updated:
Prajavani

ಬೆಳಗಾವಿ: ಉನ್ನತ ಶಿಕ್ಷಣ ಪರಿಷತ್ ನಡೆಸಿದ ವಿಶ್ವವಿದ್ಯಾಲಯಗಳ ಗುಣಮಟ್ಟ ಮೌಲ್ಯಮಾಪನ ಸಮೀಕ್ಷೆಯಲ್ಲಿ ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು (ಆರ್‌ಸಿಯು) ‘3 ಸ್ಟಾರ್’ ರೇಟಿಂಗ್‌ ಪಡೆದಿದೆ.

5ರಿಂದ 10 ವರ್ಷಗಳ ತರುಣ ವಿಶ್ವವಿದ್ಯಾಲಯಗಳ ಪಠ್ಯಕ್ರಮದ ಗುಣಮಟ್ಟ, ಮಾನವ ಸಂಪನ್ಮೂಲ ಮತ್ತು ಭೌತಿಕ ಸಂಪನ್ಮೂಲದಲ್ಲಿ ಆರ್‌ಸಿಯು ಮೊದಲ 10 ವಿಶ್ವವಿದ್ಯಾಲಯಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಬೆಂಗಳೂರಿನಲ್ಲಿ ಮಂಗಳವಾರ ಪ್ರಮಾಣಪತ್ರ ಪ್ರದಾನ ಮಾಡಿದರು. ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಹಾಗೂ ಕುಲಸಚಿವ ಪ್ರೊ.ಬಸವರಾಜ ಪದ್ಮಶಾಲಿ ಸ್ವೀಕರಿಸಿದರು.

ಪ್ರತಿಕ್ರಿಯಿಸಿ (+)