ಗುರುವಾರ , ಅಕ್ಟೋಬರ್ 29, 2020
19 °C

ಬೆಳಗಾವಿ: ಪ್ರತ್ಯೇಕ ದಾಳಿ, 6 ಮಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ಬೆಳಗಾವಿ: ನಗರದಲ್ಲಿ ಮಟ್ಕಾ ಹಾಗೂ ಕಳ್ಳಬಟ್ಟಿ ಮಾರಾಟದ ಅಡ್ಡೆ ಮೇಲೆ ಪೊಲೀಸರು ನಾಲ್ಕು ಪ್ರತ್ಯೇಕ ದಾಳಿ ನಡೆಸಿ, ಒಟ್ಟು 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಉದ್ಯಮಬಾಗ ಠಾಣೆ ಪಿಐ ದಯಾನಂದ ಶೇಗುಣಶಿ ಹಾಗೂ ಸಿಬ್ಬಂದಿ ಮಟ್ಕಾ ಆಡುವವರ ಮೇಲೆ ದಾಳಿ ನಡೆಸಿ, ಮಹಾವೀರ ಗಲ್ಲಿಯ ರಾಜು ಲೋಹಾರ ಹಾಗೂ ಮಜಗಾವಿಯ ಜ್ಯೋತಿಬಾ ಮಾನಗಾಂವಕರ ಅವರನ್ನು ಬಂಧಿಸಿದ್ದಾರೆ. ಅವರಿಂದ ₹ 4,300 ವಶಕ್ಕೆ ಪಡೆಯಲಾಗಿದೆ.

ಗ್ರಾಮೀಣ ಠಾಣೆ ಪಿಐ ಸುನೀಲ ನಂದೇಶ್ವರ ಹಾಗೂ ಸಿಬ್ಬಂದಿ ತಾಲ್ಲೂಕಿನ ಯಳ್ಳೂರದ ಚಾಂಗಳೇಶ್ವರ ಮಂದಿರ ಹತ್ತಿರ ಮಟ್ಕಾ ಆಡುತ್ತಿದ್ದ ಕಲ್ಮೇಶ್ವರ ಗಲ್ಲಿಯ ಮಯೂರ ಕದಮ ಎನ್ನುವವರನ್ನು ವಶಕ್ಕೆ ಪಡೆದು ₹ 5,250 ಹಣ ಜಪ್ತಿ ಮಾಡಿದ್ದಾರೆ. ಬೆನಕನಹಳ್ಳಿ ಗ್ರಾಮದ ಬಸ್ ನಿಲ್ದಾಣ ಬಳಿ ಮಟ್ಕಾ ಜೂಜಾಡುತ್ತಿದ್ದ  ನಾಗೇಶ ದೇಸೂರಕರ ಹಾಗೂ ಶ್ರೀಕಾಂತ ಬೆನಕೆ ಎನ್ನುವವರನ್ನು ವಶಕ್ಕೆ ಪಡೆದು ಅವರಿಂದ ₹ 4,750 ಜಪ್ತಿ ಮಾಡಿದ್ದಾರೆ.

ಉದ್ಯಮಬಾಗ ಠಾಣೆ ಪೊಲೀಸರು ಖಾನಾಪೂರ ರಸ್ತೆ ಪಕ್ಕದ ಕಳ್ಳಬಟ್ಟಿ ಮಾರುತ್ತಿದ್ದ ಆರೋಪದ ಮೇಲೆ ಉದ್ಯಮಬಾಗ ಬ್ರಹ್ಮನಗರದ ಸಂತೋಷ ಪಾಟೀಲ ಎನ್ನುವವರನ್ನು ಬಂಧಿಸಿ, 17 ಲೀಟರ್‌ ಕಳ್ಳಬಟ್ಟಿ ವಶಕ್ಕೆ ಪಡೆದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು