ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಯೋಧರ ಮೇಲೆ ಹಲ್ಲೆ; ಆರೋಪಿಯ ಬಂಧನ

Last Updated 13 ಜೂನ್ 2020, 14:31 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕಿನ ಮರಣಹೋಳ ಗ್ರಾಮದಲ್ಲಿ ಕೊರೊನಾ ಯೋಧರ ಮೇಲೆ ಹಲ್ಲೆ ಮಾಡಿದ ಎಂಟು ಜನ ಆರೋಪಿಗಳ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದ್ದು, ಪ್ರಮುಖ ಆರೋಪಿಯೊಬ್ಬನನ್ನು ಕಾಕತಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಲಕ್ಷ್ಮಣ ಭರಮಾ ಪಾಟೀಲ ಎಂಬುವರನ್ನು ಬಂಧಿಸಲಾಗಿದೆ. ಲಕ್ಷ್ಮಣ ಸಂತರಾಮ ಗಾವಡೆ, ಅಕ್ಕಪ್ಪಾ ಸುಬ್ಬಣ್ಣ ಪಾಟೀಲ, ಗಂಗುಬಾಯಿ ಸುಬ್ಬಣ್ಣ ಪಾಟೀಲ, ಸಂತ್ತುರಾಮ ಸುಬ್ಬಣ್ಣ ಪಾಟೀಲ, ರೇಣುಕಾ ಅಕ್ಕಪ್ಪಾ ಪಾಟೀಲ, ರತ್ನಾಬಾಯಿ ಅಪ್ಪಣ್ಣಾ ಪಾಟೀಲ ಹಾಗೂ ರಾಣಿ ಸಂತು ಗಾವಡೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮರಣಹೋಳ ಗ್ರಾಮದ ಸರ್ಕಾರಿ ಶಾಲೆಯ ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರದಲ್ಲಿದ್ದವರು ಪರೀಕ್ಷೆಗಾಗಿ ಗಂಟಲು ದ್ರವ ನೀಡಲು ನಿರಾಕರಿಸಿ, ಪಿಡಿಪಿ, ಗ್ರಾಮ ಲೆಕ್ಕಾಧಿಕಾರಿ, ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಆರೋಪಿಗಳು ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT