ಶನಿವಾರ, ಅಕ್ಟೋಬರ್ 19, 2019
27 °C

ವಕೀಲನ ಮೇಲೆ ಹಲ್ಲೆ: ಕ್ರಮಕ್ಕೆ ವಕೀಲರ ಆಗ್ರಹ

Published:
Updated:
Prajavani

ಬೆಳಗಾವಿ: ‘ದಕ್ಷಿಣ ಸಂಚಾರ ಠಾಣೆ ಪಿಎಸ್‌ಐ ಸುಭಾಸ್ ಭಳಸ್ಕರ ವಕೀಲ ಇರ್ಫಾನ್‌ ಬೈಯಾಲ್‌ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿ ಇಲ್ಲಿನ ವಕೀಲರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರಿನ ರಸ್ತೆಯಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

‘ಪಿಎಸ್‌ಐ ಅನ್ನು ಕೂಡಲೇ ಅಮಾನತುಗೊಳಿಸಬೇಕು’ ಎಂದು ಆಗ್ರಹಿಸಿ ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು. ಹಳೆಯ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕಪಡಿಸಿದರು.

ಸಂಘದ ಅಧ್ಯಕ್ಷ ಎ.ಜಿ. ಮುಳವಾಡಮಠ ಮಾತನಾಡಿ, ‘ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ವಕೀಲರ ಮೇಲೆ ಹಲ್ಲೆಗಳು ನಡೆಯುತ್ತಲೇ ಇವೆ. ರಕ್ಷಣೆ ಕೊಡುವಂತೆ ಈ ಹಿಂದೆಯೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೆವು. ಆದರೂ ಅಹಿತಕರ ಘಟನೆ ಮರುಕಳಿಸಿದೆ. ಇದು ಖಂಡನೀಯ. ದೌರ್ಜನ್ಯ ನಡೆಸಿದ ವ್ಯಕ್ತಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ವಕೀಲರಾದ ಮಜಗಿ ಸಿ.ಟಿ, ಗಜಾನನ ಪಾಟೀಲ, ಆರ್.ಸಿ ಪಾಟೀಲ, ಶಿವಪುತ್ರಪ್ಪ ಎನ್., ರಮೇಶ ದೇಶಪಾಂಡೆ, ಕಲ್ಮೇಶ ಮಾಯನ್ನಾಚೆ, ನಿತಿನ ಗಂಗಾಯಿ ಪಾಲ್ಗೊಂಡಿದ್ದರು.

Post Comments (+)