ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮೀನುಗಳಿಗೆ ಕೃಷಿ ಅಧಿಕಾರಿಗಳ ಭೇಟಿ, ಸಲಹೆ

Last Updated 14 ಜುಲೈ 2021, 6:29 IST
ಅಕ್ಷರ ಗಾತ್ರ

ಐಗಳಿ (ಬೆಳಗಾವಿ ಜಿಲ್ಲೆ): ಚಮಕೇರಿ, ಯಕ್ಕಂಚಿ, ಯಲಿಹಡಲಗಿ, ಕೋಹಳ್ಳಿ, ಅಡಹಳಟ್ಟಿ ಗ್ರಾಮಗಳ ರೈತರ ಜಮೀನಗಳಿಗೆ ಕೃಷಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಬೆಳೆಗಳನ್ನು ವೀಕ್ಷಿಸಿದರು. ಕೀಟ ಬಾಧೆ ನಿವಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆಗಳನ್ನು ನೀಡಿದರು.

ಸಮೀಪದ ಅಡಹಳಟ್ಟಿಯ ಸಾವಯವ ಕೃಷಿಕ ಸಿದರಾಯ ಸಾತಣ್ಣವರ ಜಮೀನಿನಲ್ಲಿ ಜಂಟಿ ನಿರ್ದೇಶಕ ಶಿವನಗೌಡ ಎಸ್.ಪಾಟೀಲ ಮಾತನಾಡಿ, ‘ಬಿತ್ತನೆಯಾದ 55ನೇ ದಿನಕ್ಕೆ ತೊಗರಿಯ ಗಿಡಗಳ ಕುಡಿ ಚಿವುಟಬೇಕು. ಇದರಿಂದ ಗಿಡವು ಹೆಚ್ಚು ಕಾಯಿ ಬಿಡುತ್ತದೆ’ ಎಂದು ತಿಳಿಸಿದರು.

ಸೋಯಾಅವರೆ ಬೆಳೆಯಲ್ಲಿ ತುಕ್ಕು ರೋಗ ನಿವಾರಣೆಗೆ ಮಾಡಬೇಕಾದ ಔಷಧೋಪಚಾರದ ಬಗ್ಗೆ ಸಲಹೆ ನೀಡಿದರು.

ಉಪ ನಿರ್ದೇಶಕ ಎಲ್.ಐ. ರೂಡಗಿ, ಅಥಣಿಯ ಸಹಾಯಕ ಕೃಷಿ ನಿರ್ದೆಶಕಿ ಜಯಶ್ರೀ ಹಿರೇಮಠ, ತೆಲಸಂಗದ ಕೃಷಿ ಅಧಿಕಾರಿ ಯಂಕಪ್ಪ ಉಪ್ಪಾರ, ತುಕ್ಕಾನಟ್ಟಿಯ ವಿಜ್ಞಾನಿಗಳಾದ ಡಾ.ಮಾರುತಿ ಮಲವಾಡೆ, ಡಾ.ಸಿದ್ದಲಿಂಗ ಹೂಗಾರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT