ಐಗಳಿ: ‘ಯಾವುದೇ ಉತ್ತಮ ಕೆಲಸ ಮಾಡಬೇಕಾದರೆ ಎಲ್ಲರೂ ಅದಕ್ಕೆ ಕೈಜೋಡಿಸಬೇಕು. ಶುದ್ಧ ಮನಸ್ಸಿನಿಂದ ಕಾಯಕ ಮಾಡಿದರೆ ಭಗವಂತ ಮೆಚ್ಚುತ್ತಾನೆ’ ಎಂದು ತುಬಚಿಯ ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.

ಗ್ರಾಮದಲ್ಲಿ ಲಿಂ.ಅಪ್ಪಯ್ಯ ಶಿವಯೋಗಿಗಳ ಪುತ್ಥಳಿ ಪ್ರತಿಷ್ಠಾಪನೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಲಿಂ.ಅಪ್ಪಯ್ಯ ಶಿವಯೋಗಿಗಳು ತುಬಚಿ ಮಠದಲ್ಲಿ ಕೆಲವು ವರ್ಷ ಇದ್ದರು. ಈಗ ಮಠ ಜಿರ್ಣೋದ್ಧಾರವಾಗಿ ಸುಂದರ ವಿರಕ್ತಮಠ ನಿರ್ಮಾಣವಾಗಿದೆ. ಐಗಳಿಯಲ್ಲಿ ಅಪ್ಪಯ್ಯ ಸ್ವಾಮಿಗಳು ಲಿಂಗೈಕ್ಯರಾಗಿದ್ದ ಸ್ಥಳದಲ್ಲಿ ಭವ್ಯ ದೇವಾಲಯವಿದೆ. ಈಗ ಶ್ರೀಗಳ ಶತಮಾನೋತ್ಸವ ಪ್ರಯುಕ್ತ ಬೃಹತ್ ಪುತ್ಥಳಿ ನಿರ್ಮಿಸುತ್ತಿದ್ದು, ಅದರ ಕೆಳಗೆ ಜ್ಞಾನ ಮಂದಿರ, ಹೂತೋಟ ಕಾಮಗಾರಿ ನಡೆಯಲಿವೆ’ ಎಂದರು.

ಅಥಣಿಯ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮಿಜಿ, ‘ಲಿಂ.ಅಪ್ಪಯ್ಯ ಶಿವಯೋಗಿಗಳು ಮಾಡಿದ ಪವಾಡಗಳು ಜನರ ಮನದಾಳದಲ್ಲಿ ಉಳಿದಿವೆ’ ಎಂದು ತಿಳಿಸಿದರು.

ತೆಲಸಂಗದ ವೀರೇಶ ದೇವರು ಆಶೀರ್ವಚನ ನೀಡಿದರು. ಎ.ಎಸ್.ತೆಲಸಂಗ, ಅಪ್ಪು ಮಾಳಿ ಮಾತನಾಡಿದರು.

ಐಪಿಎಸ್ ಅಧಿಕಾರಿ ರವೀಂದ್ರ ಗದಾಡಿ, ಕೆಎಎಸ್ ಅಧಿಕಾರಿಗಳಾದ ಅಶೋಕ ಮಿರ್ಜಿ, ಮಲಗೌಡ ಝರೆ, ಅಭಿಯಂತ ರಾಜಶೇಖರ ಟೋಪಗಿ ಹಾಗೂ ಜಗದೀಶ ನೇಮಗೌಡ ಅವರನ್ನು ಸತ್ಕರಿಸಲಾಯಿತು.

ಮಹಾದೇವ ಬಬಲಾದಿಮಠ, ಸಾಬಣ್ಣ ಪೂಜಾರಿ, ಅಶೋಕ ಮುದಗೌಡರ, ನಿಂಗನಗೌಡ ಪಾಟೀಲ, ನೂರಅಹ್ಮದ್ ಡೊಂಗರಗಾಂವ, ಕಲ್ಮೇಶ ಆಸಂಗಿ, ಸಿದ್ದಪ್ಪ ಬಳ್ಳೊಳ್ಳಿ, ಅಪ್ಪಾಸಾಬ ಪಾಟೀಲ, ಬಸವಂತ ಗುಡ್ಡಾಪುರ, ಎಂ.ಬಿ.ನೇಮಗೌಡ, ರವೀಂದ್ರ ಹಾಲಳ್ಳಿ ಇದ್ದರು.

ಶಿವಾನಂದ ಸಿಂಧೂರ ಸ್ವಾಗತಿಸಿದರು. ಬಸವರಾಜ ತೆಲಸಂಗ ನಿರೂಪಿಸಿದರು. ಮಹಾಂತೇಶ ಕಾಂಬಳೆ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-21-1185760322

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.