ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಧರ್ಮಗ್ರಂಥಗಳಲ್ಲಿ ಮಾನವೀಯ ಸಂದೇಶ’

Last Updated 31 ಅಕ್ಟೋಬರ್ 2020, 4:18 IST
ಅಕ್ಷರ ಗಾತ್ರ

ತಲ್ಲೂರ: ‘ಎಲ್ಲ ಧರ್ಮಗ್ರಂಥಗಳೂ ಮಾನವೀಯ ಸಂದೇಶಗಳನ್ನು ಸಾರಿವೆ. ಎಲ್ಲರಿಗೂ ಒಳ್ಳೆಯದನ್ನೆ ಮಾಡು. ಯಾರಿಗೂ ಅನ್ಯಾಯ, ಮೋಸ ಎಸಗಬೇಡ. ಪರಸ್ಪರ ಧರ್ಮಗಳನ್ನು ಗೌರವಿಸು ಎಂದು ಹೇಳುತ್ತವೆ’ ಎಂದು ಮುನವಳ್ಳಿಯ ಸೋಮಶೇಖರ ಮಠದ ಮುರಘೇಂದ್ರ ಸ್ವಾಮೀಜಿ ತಿಳಿಸಿದರು.

ಇಲ್ಲಿನ ಮುಸ್ಲಿಮರು ಮಸೀದಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಪ್ರವಾದಿ ಮಹಮ್ಮದ್ ಅವರ ಕರುಣೆ, ಪ್ರೀತಿ, ಪರೋಪಕಾರ ಹಾಗೂ ಮಾನವೀಯ ಮೌಲ್ಯಗಳು ನಮ್ಮೆಲ್ಲರಿಗೂ ದಾರಿ ದೀಪವಾಗಿವೆ. ಈ ದೀಪದಿಂದ ವಂಚಿತರಾಗುವವರು ಕತ್ತಲಿನೆಡಗೆ ಸಾಗುವರು’ ಎಂದರು. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತಾರಹುಸೇನ ಪಠಾಣ ಮಾತನಾಡಿದರು. ಮುಸ್ಲಿಂ ಮುಖಂಡರನ್ನು ಸತ್ಕರಿಸಲಾಯಿತು.

ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದಾವಲಸಾಬ ದಾವಲಸಾಬ ಚಪ್ಟಿ, ಶಕೀಲಅಹಮದ ರಜೀಯಾ, ಮೇರಾಸಾಬ ವಟ್ನಾಳ, ರಿಚರ್ಡ್, ಹಪಿಸಾಬ ಮುಲ್ಲಾ, ಆಜಾದ ಕುದರಿ, ರಹೀಮಸಾಬ ಮುಲ್ಲಾ, ಮೆಹಬೂಬಸಾಬ ಬಾಗವಾನ, ಬಾಬುಸಾಬ ಹವಾಲ್ದಾರ, ಮಲಿಕಸಾಬ ಸಾಬರ, ಸುಭಾನಿ ಬೆಟಗೇರಿ, ಮೌಲಾಸಾಬ ಆನಿ, ಕಮಾಲಸಾಬ ಜಂಗಲೆಪ್ಪನವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT