ಅಂಗಡಿ ಕಾಲೇಜಲ್ಲಿ ಅಂಬೇಡ್ಕರ್‌ ಸ್ಮರಣೆ

ಶನಿವಾರ, ಏಪ್ರಿಲ್ 20, 2019
29 °C

ಅಂಗಡಿ ಕಾಲೇಜಲ್ಲಿ ಅಂಬೇಡ್ಕರ್‌ ಸ್ಮರಣೆ

Published:
Updated:
Prajavani

ಬೆಳಗವಿ: ‘ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಜ್ಞಾನವೇ ಶಕ್ತಿ ಎಂದು ನಂಬಿದ ಅವರ ಜ್ಞಾನ ಮತ್ತು ಆದರ್ಶಗಳನ್ನು ಯುವಜನತೆ ಅರಿತುಕೊಂಡು ಮುನ್ನಡೆಯಬೇಕು’ ಎಂದು ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಕಾಲೇಜು ಪ್ರಾಚಾರ್ಯ ಸಂಜಯ ಪೂಜಾರಿ ತಿಳಿಸಿದರು.

ಕಾಲೇಜಿನಲ್ಲಿ ಭಾನುವಾರ ನಡೆದ ಡಾ.ಬಿ.ಆರ್. ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

‘ಅವರ ಸಾಮಾಜಿಕ ಆದರ್ಶಗಳಾದ ಸ್ವಾತಂತ್ರ್ಯ, ಸಮಾನತೆ, ಮಾನವೀಯತೆ ಮತ್ತು ಸಹೋದತ್ವದ ಭಾವನೆಗಳನ್ನು ನಾವೆಲ್ಲರೂ ಜೀವನದ ತತ್ವಗಳನ್ನಾಗಿ ಅಳವಡಿಸಿಕೊಳ್ಳಬೇಕು. ಈ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು’ ಎಂದರು.

ಕಾಲೇಜಿನ ಪ್ರೊ.ಸದಾನಂದ ದೊಡಮನಿ, ವಿಜಯ ಕುಲಕರ್ಣಿ, ಪ್ರೊ.ಕಿರಣ ಪೋತದಾರ, ಡಾ.ಅಶೋಕ ಹುಲಗಬಾಳಿ, ಡಾ.ಪ್ರಭಾಕರ ಮುತಾಲಿಕ ದೇಸಾಯಿ, ಪ್ರೊ.ವಸಂತ ಉಪಾಧ್ಯೆ, ದೈಹಿಕ ಶಿಕ್ಷಣ ನಿರ್ದೇಶಕ ವಿಶಾಂತ ಧಮೋಣೆ, ಮಂಜುಶ್ರೀ ಹಾವಣ್ಣವರ, ಅಂಕಿತಾ ಕೊಣ್ಣೂರ, ಶಂಕರ ಹಿರೇಮಠ, ಗಿರೀಶ ಮಡ್ಡಿಮನಿ, ಬಸವರಾಜ ಕುಂಬಾರ, ಪ್ರೊ.ಸಾಗರ ಬಿರ್ಜೆ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !