‘ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಅನನ್ಯ’

ಶನಿವಾರ, ಜೂಲೈ 20, 2019
25 °C
ಜಿಲ್ಲಾ ಲೇಖಕಿಯರ ಸಂಘದ 19ನೇ ವಾರ್ಷಿಕೋತ್ಸವ

‘ಸಾಹಿತ್ಯಕ್ಕೆ ಮಹಿಳೆಯರ ಕೊಡುಗೆ ಅನನ್ಯ’

Published:
Updated:
Prajavani

ಬೆಳಗಾವಿ: ‘ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ಕನ್ನಡದ ಉದಯೋನ್ಮುಖ ಲೇಖಕಿಯರಿಗೆ ಮಾರ್ಗದರ್ಶನ ನೀಡಲು ಹಿರಿಯ ಸಾಹಿತಿಗಳನ್ನು ಆಹ್ವಾನಿಸಿ ಕಾವ್ಯ, ಕಥಾ ಕಮ್ಮಟಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ಅಧ್ಯಕ್ಷೆ ಜ್ಯೋತಿ ಬದಾಮಿ ಹೇಳಿದರು.

ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ನಡೆದ ಜಿಲ್ಲಾ ಲೇಖಕಿಯರ ಸಂಘದ 19ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ‘ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಮಹಿಳೆಯರ ಕೊಡುಗೆ ಅನನ್ಯವಾಗಿದೆ’ ಎಂದರು.

ಮೂವತ್ತು ಲೇಖಕಿಯರನ್ನು ಸಾಹಿತ್ಯ, ಸಾಂಸ್ಕೃತಿಕ, ಕಲೆಗೆ ನೀಡಿದ ಕೊಡುಗೆ ಪರಿಗಣಿಸಿ ಗೌರವಿಸಲಾಯಿತು. ಪಿಎಚ್‌ಡಿ ಪಡೆದ ಡಾ.ಭಾರತಿ ಮಠದ, ಡಾ.ನೀತಾ ರಾವ್, ಡಾ.ಶೈಲಜಾ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು.

ಸಂಘದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಆಶಾ ಯಮಕನಮರಡಿ ಮಂಡಿಸಿದರು. ವಿಜಯ ಪುಟ್ಟಿ ಅವರನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ್ ವೇದಿಕೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಸನ್ಮಾನಿಸಲಾಯಿತು. ಲೇಖಕಿಯರಾದ ರತ್ನಾ ಬೆಲ್ಲದ, ರಂಜನಾ ನಾಯಕ, ಪ್ರೇಮಾ ತಹಶೀಲ್ದಾರ್‌, ಶಾಂತಾ ಮಸೂತಿ, ಬಸವರಾಜ ಸಸಾಲಟ್ಟಿ, ಜಯಶ್ರೀ ಅಬ್ಬಿಗೇರಿ, ಪ್ರೇಮಾ ಅಂಗಡಿ, ಜ್ಯೋತಿ ಭಾವಿಕಟ್ಟಿ, ಅನಿತಾ ಚಟ್ಟರ, ಆಶಾ ಕಡಪಟ್ಟಿ, ಸರಿತಾ ಕುಲಕರ್ಣಿ, ಸುನಂದಾ ಎಮ್ಮಿ, ಶ್ವೇತಾ ನರಗುಂದ, ನೀಲಗಂಗಾ ಚರಂತಿಮಠ, ದೀಪಿಕಾ ಚಾಟೆ, ಸುಧಾ ಪಾಟೀಲ, ನಿರ್ಮಲಾ ಎಲಿಗಾರ, ರೇಖಾ ಶ್ರೀನಿವಾಸ್, ಉಮಾ ಅಂಗಡಿ, ಹಮೀದಾ ಬಾನು, ಸುನಿತಾ ಪಾಟೀಲ, ಜಯಶ್ರೀ ನಿರಾಕಾರಿ, ಶೈಲಜಾ ಕುಲಕರ್ಣಿ, ರುದ್ರಾಂಬಿಕಾ ಯಾಳಗಿ, ರಾಜನಂದಾ ಘಾರ್ಗಿ ಇದ್ದರು.

ದಾಕ್ಷಾಯಿಣಿ ಕಾಪ್ಸೆ ಪ್ರಾರ್ಥನಾ ಗೀತೆ ಹಾಡಿದರು. ಲಲಿತಾ ಕ್ಯಾಸಣ್ಣವರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !