ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನುಭವ ಮಂಟಪ’ ಕಾಮಗಾರಿ ವೀಕ್ಷಿಸಿದ ತೋಂಟದ ಶ್ರೀ

Last Updated 1 ಅಕ್ಟೋಬರ್ 2021, 13:26 IST
ಅಕ್ಷರ ಗಾತ್ರ

ಬೆಳಗಾವಿ: ಸಮಾನತೆಯ ಹರಿಕಾರ ಬಸವೇಶ್ವರರ ಜೀವನದ ಸಾಧನೆ ಸಾರುವ ಅನುಭವ ಮಂಟಪ ಕೆಲವೇ ದಿನಗಳಲ್ಲಿ ಇಲ್ಲಿ ಸಿದ್ಧಗೊಳ್ಳಲಿದೆ.

ಉತ್ತರ ಮತಕ್ಷೇತ್ರದ ಬಿಜೆಪಿ ಶಾಸಕ ಅನಿಲ ಬೆನಕೆ ಅವರ ಪ್ರಯತ್ನದ ಫಲವಾಗಿ ಮಹಾಂತೇಶ ನಗರದ ಅಕ್ಕಮಹಾದೇವಿ ಮಾರ್ಗದಲ್ಲಿ ಅನುಭವ ಮಂಟಪ ಸ್ಥಾಪನೆಗೆ ಕಟ್ಟಡ ಗುರುತಿಸಲಾಗಿದೆ. ಅಲ್ಲಿ ₹ 5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ. ಅವುಗಳನ್ನು ತೋಂಟದಾರ್ಯ ಮಠದ ಗುರುಸಿದ್ಧ ಸ್ವಾಮೀಜಿ ಶುಕ್ರವಾರ ವೀಕ್ಷಿಸಿ ಶುಭ ಹಾರಿಸಿದರು.

‘ಬಸವಣ್ಣನವರ ಸಂಪೂರ್ಣ ಜೀವನ ಚರಿತ್ರೆಯನ್ನು ಅಥವಾ ಸಾಧನೆಯನ್ನು ಇಲ್ಲಿ ಕಟ್ಟಿಕೊಡಲಾಗುವುದು. ಗ್ರಂಥಾಲಯ, ಬಸವಣ್ಣನವರು 12ನೇ ಶತಮಾನದಲ್ಲಿ ಸ್ಥಾಪಿಸಿದ ಪಾರ್ಲಿಮೆಂಟ್‌ ಮಾದರಿಯ ಸಭಾಭವನ ಸ್ಥಾಪನೆ ಮಾಡಲಾಗುತ್ತಿದೆ. ಬಸವಣ್ಣನವರ ವಚನಗಳನ್ನು ಐದು ಭಾಷೆಗಳಲ್ಲಿ ಆಡಿಯೊ ಹಾಗೂ ವಿಡಿಯೊ ಮೂಲಕ ಸಂದರ್ಶಕರಿಗೆ ತಿಳಿಸುವ ವ್ಯವಸ್ಥೆ ಆಗಲಿದೆ. ನಗರದ ಮತ್ತೊಂದು ಆಕರ್ಷಣೆಯ ಕೇಂದ್ರ ಇದಾಗಲಿದೆ’ ಎಂದು ಬೆನಕೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT