ಭಾನುವಾರ, ಸೆಪ್ಟೆಂಬರ್ 15, 2019
30 °C

ಮಟ್ಕಾ ಜೂಜಾಟ ತಡೆಯಲು ನಿರ್ಲಕ್ಷ್ಯ: ಎಎಸ್‌ಐ, ಕಾನ್‌ಸ್ಟೆಬಲ್ ಅಮಾನತು

Published:
Updated:

ಬೆಳಗಾವಿ: ‘ಸವದತ್ತಿ ತಾಲ್ಲೂಕಿನ ಸಿಂದೋಗಿ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ಪಣಕ್ಕಿಟ್ಟು ನಡೆಯುತ್ತಿದ್ದ ಮಟ್ಕಾ ಜೂಜಾಟ ತಡೆಯುವಲ್ಲಿ ನಿರ್ಲಕ್ಷ್ಯ ವಹಿಸಿದ ಸವದತ್ತಿ ಠಾಣೆಯ ಎಎಸ್‌ಐ ಕೆ.ಎಂ. ಕಲ್ಲೂರು ಮತ್ತು ಕಾನ್‌ಸ್ಟೆಬಲ್‌ ಎಸ್‌.ಆರ್. ರಾಮದುರ್ಗ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

‘ಆ ಗ್ರಾಮದ ಈರಪ್ಪ ಉಳ್ಳಾಗಡ್ಡಿ ಮತ್ತು ಅವನ ಪುತ್ರ ಸೇರಿ ಸುತ್ತಮುತ್ತಲಿನ ಗ್ರಾಮದ ನಿವಾಸಿಗಳಿಂದ ಲಕ್ಷಾಂತರ ರೂಪಾಯಿಗಳ ಮಟ್ಕಾ ಮತ್ತು ಜೂಜಾಟ ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದಿತ್ತು. ಹೀಗಾಗಿ, ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ರಾಮದುರ್ಗ ಡಿವೈಎಸ್ಪಿಗೆ ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

Post Comments (+)