ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ| ಬಡವರಿಗೆ ನೆರವಾಗಿ ಬಸವ ಜಯಂತಿ ಆಚರಣೆ

Last Updated 26 ಏಪ್ರಿಲ್ 2020, 12:51 IST
ಅಕ್ಷರ ಗಾತ್ರ

ಅಥಣಿ: ‘ಕಾಯಕ, ದಾಸೋಹವನ್ನು ಉಸಿರಾಗಿಸಿಕೊಂಡಿದ್ದ ಬಸವಾದಿ ಶಿವ ಶರಣರು ನಮಗೆಲ್ಲರಿಗೂ ದಾರಿ ದೀಪವಾಗಿದ್ದಾರೆ’ ಎಂದು ಶೆಟ್ಟರಮಠದ ಮರಳುಸಿದ್ಧ ಸ್ವಾಮೀಜಿ ಹೇಳಿದರು.

887ನೇ ಬಸವ ಜಯಂತಿ ಅಂಗವಾಗಿ ಇಲ್ಲಿನ ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆ ಅಧ್ಯಕ್ಷ ಧರೇಪ್ಪ ಠಕ್ಕಣ್ಣವರ ಅವರ ಮನೆಯಲ್ಲಿ ನಡೆದ ಆಚರಣೆ ಹಾಗೂ ಬಡವರಿಗೆ ದವಸ ದಾನ್ಯ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಸವ ಜಯಂತಿಯಂದು ಬಡವರಿಗೆ ನೆರವಾಗುವುದು ಶ್ಲಾಘನೀಯ’ ಎಂದರು.

ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸೂಚನೆಯಂತೆ 50 ಬಡ ಕುಟುಂಬಗಳಿಗೆ ತಲಾ 50 ಕೆ.ಜಿ ಜೋಳ, 25 ಕೆ.ಜಿ ಅಕ್ಕಿ, ಎರಡು ತಿಂಗಳಿಗಾಗುವಷ್ಟು ದಿನಸಿ ಸಾಮಗ್ರಿ ಹಾಗೂ ಒಂದು ಬಾಕ್ಸ್‌ ಮಾವಿನ ಹಣ್ಣು ಮೊದಲಾದವುಗಳನ್ನು ವಿತರಿಸಿದರು.

ವಚನ ಪ್ರಾರ್ಥನೆ ನಡೆಯಿತು. ಶಿವಪ್ಪ ಠಕ್ಕಣ್ಣವರ, ಬಸವರಾಜ ಠಕ್ಕಣ್ಣವರ, ಬಸವಪ್ರಭು ಪಾಟೀಲ, ಬಾಬು ಬಕಾರಿ, ರಾಮು ಮಾಳಿ, ಸಂತೋಷ ಗಾಳಿ, ಬೀಮು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT