ಶುಕ್ರವಾರ, ನವೆಂಬರ್ 22, 2019
23 °C

‘ಯುವಜನರು ದ್ವೇಷಕ್ಕೆ ಬಲಿಯಾಗಬಾರದು’

Published:
Updated:
Prajavani

ಅಥಣಿ: ‘ಯುವಜನರು ಜಾತಿ, ಮತ ತಾರತಮ್ಯ, ದ್ವೇಷಕ್ಕೆ ಬಲಿಯಾಗಬಾರದು. ಆದರ್ಶ ಕಾರ್ಯದ ಗುರಿ ಹೊಂದಬೇಕು’ ಎಂದು ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಎಚ್.ಎಂ. ಮುಜೀಬ್‌ ಅಹಮ್ಮದ್ ಹೇಳಿದರು.

ಇಲ್ಲಿನ ಶ್ರೀಕೃಷ್ಣರಾವ ಅಣ್ಣಾರಾವ ಲೋಕಾಪುರ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ಮತ್ತು ಇಂಗ್ಲಿಷ್‌ ವಿಭಾಗದ ತರಗತಿಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದೇಶ ಧರ್ಮ, ಸಂಸ್ಕೃತಿ ಹಾಗೂ ಪರಂಪರೆಯ ದಾರಿಯಲ್ಲಿ ಸಾಗಿ ಬಂದಿದೆ. ತಾಯ್ನಾಡಿನ ಸೇವೆ ಪ್ರಮುಖವಾಗಬೇಕು. ಎಲ್ಲರೂ ಒಂದೇ ಎನ್ನುವುದನ್ನು ಮರೆಯಬಾರದು’ ಎಂದರು.

ವಿಮೋಚನಾ ಸಂಸ್ಥೆ ಅಧ್ಯಕ್ಷ ಬಿ.ಎಲ್. ಪಾಟೀಲ, ಜೆ.ಇ. ಸೊಸೈಟಿ ಅಧ್ಯಕ್ಷ ಅರವಿಂದರಾವ ದೇಶಪಾಂಡೆ ಮಾತನಾಡಿದರು.

ಅಕ್ಷತಾ ಜಾಧವ ಹಾಗೂ ತಂಡದವರು ಪ್ರಾರ್ಥಿಸಿದರು. ಉಪನ್ಯಾಸಕಿ ಎ.ಇ. ಹಲಗೇರಿ ಸ್ವಾಗರಿಸಿದರು. ಉಪನ್ಯಾಸಕ ಜೆ.ಎಸ್. ಕೂಡವಕ್ಕಲಗಿ ಪ್ರಾಸ್ತಾವಿಕ ಮಾತನಾಡಿದರು. ಸೌಂದರ್ಯಾ ಅಲಿಬಾದಿ, ಸವಿತಾ ಹೊಸವಾಡ ನಿರೂಪಿಸಿದರು. ಉಪನ್ಯಾಸಕ ಪಿ.ಎಸ್. ಚನರೆಡ್ಡಿ ಮತ್ತು ಆರ್.ಎಂ. ದೇವರೆಡ್ಡಿ ವಂದಿಸಿದರು.

ಪ್ರತಿಕ್ರಿಯಿಸಿ (+)