ಅಥಣಿ: ಪಟ್ಟಣದ ಯಶಸ್ವಿನಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರೋಟರಿ ಸಂಸ್ಥೆಯ ಸಹಯೋಗದೊಂದಿಗೆ ಯಶೋದಾ ಡಯಾಲಿಸಿಸ್ ಘಟಕ ಆರಂಭಿಸಿರುವುದು ಮೂತ್ರಪಿಂಡ ಸಮಸ್ಯೆಯ ರೋಗಿಗಳಿಗೆ ಬಹಳಷ್ಟು ಸಹಕಾರಿಯಾಗಿದೆ ಎಂದು ರೋಟರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಹೇಳಿದರು.

ಅವರು ಅಥಣಿ ಪಟ್ಟಣದ ಇತ್ತೀಚೆಗೆ ಯಶಸ್ವಿನಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಯಶೋಧ ಡಯಾಲಿಸಿಸ್ ಘಟಕದ 5 ಅತ್ಯಾಧುನಿಕ ಯಂತ್ರೋಪಕರಣಗಳ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮೂತ್ರಪಿಂಡ ರೋಗಿಗಳಿಗೆ ಸುಧಾರಿತ ಚಿಕಿತ್ಸೆ ಅತ್ಯಂತ ಅನುಕೂಲಕರ ಬೆಲೆಯಲ್ಲಿ ಲಭ್ಯವಾಗಲಿದೆ.

ವಿಜಯಪುರದ ಯಶೋಧಾ ಆಸ್ಪತ್ರೆಯ ಹಿರಿಯ ಮೂತ್ರಪಿಂಡ ತಜ್ಞ ಡಾ. ರವೀಂದ್ರ ಮದ್ರಕಿ ಮಾತನಾಡಿ, ನಮ್ಮ ಕೇಂದ್ರದಲ್ಲಿ ರೋಗಿಗಳಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಸೇವೆ ದೊರಕಲಿದೆ ಎಂದು ಹೇಳಿದರು.

ರೋಟರಿ ಕ್ಲಬ್ ಅಧ್ಯಕ್ಷ ಸಚಿನ್ ದೇಸಾಯಿ, ಡಾ. ಕಮಲಾ ಮದ್ರಕಿ, ಡಾ. ಶರಣ ಮಳಕೇಡಕರ, ಡಾ. ಆನಂದ ಕುಲಕರ್ಣಿ, ಡಾ. ಸಂಕ್ರಟ್ಟಿ, ಡಾ. ಅವಿನಾಶ ನಾಯಕ, ಮೇಘರಾಜ್ ಫಾರಮಾರ, ಅರುಣ ಸೌದಾಗರ, ಸುರೇಶ್ ಬಳ್ಳೊಳ್ಳಿ, ಬಾಳಪ್ಪ ಬುಕಿಟಗಾರ, ಭರತ್ ಸೋಮಯ್ಯ, ಅನಿಲರಾವ್ ದೇಶಪಾಂಡೆ, ಶಶಿಕಾಂತ್ ಹುಲಕುಂದ, ಮೋಹನ್ ರಾವ್, ರಾಜಶೇಖರ ಹಾದಿಮನಿ, ಗೌರಿಶಂಕರ ಸಿಂದಗಿ, ರೋಟರಿ ಸಂಸ್ಥೆಯ ಸದಸ್ಯರು ಆಸ್ಪತ್ರೆಯ ಸಿಬ್ಬಂದಿ ಇದ್ದರು .

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-21-1912805351

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.