ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಥಣಿ, ಕಾಗವಾಡ: ಅಖಾಡ ಸಿದ್ಧ

Last Updated 1 ಡಿಸೆಂಬರ್ 2019, 11:17 IST
ಅಕ್ಷರ ಗಾತ್ರ

ಬೆಳಗಾವಿ: ಅಥಣಿ ಹಾಗೂ ಕಾಗವಾಡ ಕ್ಷೇತ್ರಗಳಿಗೆ ಡಿ. 5ರಂದು ನಡೆಯಲಿರುವ ಉಪಚುನಾವಣೆಗೆ ಅಖಾಡ ಸಿದ್ಧವಾಗಿದೆ. ಅಥಣಿಯಲ್ಲಿ ಕಾಂಗ್ರೆಸ್–ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಕಾಗವಾಡದಲ್ಲಿ ಜೆಡಿಎಸ್‌ ಅಭ್ಯರ್ಥಿ ಕಣದಲ್ಲಿರುವುದರಿಂದ ತ್ರಿಕೋನ ಪೈಪೋಟಿ ಇದೆ.

ನಾಮಪತ್ರ ವಾಪಸ್ ಪಡೆಯಲು ಗುರುವಾರ ಕೊನೆಯ ದಿನವಾಗಿತ್ತು.

ಕಾಗವಾಡದಲ್ಲಿ ಪಕ್ಷೇತರ ಅಭ್ಯರ್ಥಿ ಅಮುಲ್ ಸದಾಶಿವ ಸರಡೆ ನಾಮಪತ್ರ ವಾಪಸ್ ಪಡೆದಿದ್ದಾರೆ. ಇಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿರುವ ಶ್ರೀಶೈಲ ಹಳ್ಳದಮಳ ತಾವು ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದಾರೆ.

ಅಥಣಿಯಲ್ಲಿ 8 ಮಂದಿ ಕಣದಿಂದ ಹಿಂದೆ ಸರಿದಿದ್ದಾರೆ. ಗುರಪ್ಪ ದಾಸ್ಯಾಳ (ಜೆಡಿಎಸ್), ದಾವಲಸಾಬ ಆಲಿಸಾಬ ನದಾಫ, ಅಜ್ಜಪ್ಪಗೋಳ ಬಾಹುಬಲಿ ಸಿದ್ದಪ್ಪ, ಗುರುಪುತ್ರ ಕೆಂಪಣ್ಣ ಕುಳ್ಳೂರ, ರಸೂಲಸಾಬ ಮೀರಾಸಾಬ ನದಾಫ, ಶಹಜಹಾನ್ ಡೊಂಗರಗಾಂವ, ಸಿದ್ರಾಮಗೌಡ ಪುರುಷೋತ್ತಮ ಪಾಟೀಲ, ಸದಾಶಿವ ಕೇದಾರಿ ಬುಟಾಳೆ ನಾಮ‍ಪತ್ರ ವಾಪಸ್ ಪಡೆದಿದ್ದಾರೆ.

ಕಣದಲ್ಲಿರುವವರು: ಅಥಣಿ: ಮಹೇಶ ಕುಮಟಳ್ಳಿ (ಬಿಜೆಪಿ), ಗಜಾನನ ಮಂಗಸೂಳಿ (ಕಾಂಗ್ರೆಸ್), ವಿನಾಯಕ ಮಠಪತಿ (ಕರ್ನಾಟಕ ಜನತಾಪಕ್ಷ). ನಾಗನಾಥ (ಉತ್ತಮ ಪ್ರಜಾಕೀಯ ಪಕ್ಷ), ರವಿ ಪಡಸಲಗಿ, ಶ್ರೀಶೈಲ ಹಳ್ಳದಮಳ, ರಾಜು ಡವರಿ, ಇಮ್ರಾನ ಪಟೇಲ (ಎಲ್ಲರೂ ಪಕ್ಷೇತರರು).

ಕಾಗವಾಡ: ರಾಜು ಕಾಗೆ (ಕಾಂಗ್ರೆಸ್), ಶ್ರೀಮಂತ ಪಾಟೀಲ (ಬಿಜೆಪಿ), ಶ್ರೀಶೈಲ ತುಗಶೆಟ್ಟಿ (ಜೆಡಿಎಸ್), ದೀಪಕ ಜಗನ್ನಾಥ ಬುರ್ಲಿ (ಉತ್ತಮ ಪ್ರಜಾಕೀಯ ಪಕ್ಷ), ವಿವೇಕ ಜಯೇಂದ್ರ ಶೆಟ್ಟಿ (ವಂಚಿತ್ ಬಹುಜನ ಆಘಾಡಿ), ಅರ್ಚನಾ ಗಣಪತಿ ಮೊಳೇಕರ, ಸಂದೀಪ ಕಾಂಬಳೆ, ಸಚಿನ ಕಲ್ಲಪ್ಪ ಅಲಗೂರ, ಮುರಿಗೆಪ್ಪ ನಿಂಗಪ್ಪ ದೇವರೆಡ್ಡಿ (ಎಲ್ಲರೂ ಪಕ್ಷೇತರರು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT