ಅಥಣಿ: ನಿಷ್ಠಾವಂತ ಕಾಯಕದ ಮೂಲಕ ಸಂಪತ್ತು ಸಂಪಾದಿಸಿರಿ. ನಿಸ್ವಾರ್ಥ ದಾಸೋಹದ ಮೂಲಕ ಸಮಾಜಕ್ಕೆ ಅರ್ಪಣೆ ಮಾಡಿರಿ. ಕಾಯಕ ಹಾಗೂ ದಾಸೋಹ ನಮ್ಮನ್ನು ಪುಣ್ಯದ ಮಾರ್ಗದ ಕಡೆಗೆ ತೆಗೆದುಕೊಂಡು ಹೋಗುವ ಸಾಧನಗಳಾಗಿವೆ ಎಂದು ಜನವಾಡ ಅಲ್ಲಮಪ್ರಭು ಆಶ್ರಮದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

ಪಟ್ಟಣದ ಸಾಯಿ ನಗರದ ಬಸವ ಉದ್ಯಾನ ವನದಲ್ಲಿ ಬಸವ ಜಯಂತಿ ಅಂಗವಾಗಿ ಜರಗುತ್ತಿರುವ ಶರಣರ ಜೀವನ ದರ್ಶನ ಪ್ರವಚನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಪ್ರಾಮಾಣಿಕತೆಯಿಂದ ಬಂದ ಸಂಪತ್ತಿನಲ್ಲಿಯೇ ಪರೋಪಕಾರ ಮಾಡಬೇಕು. ಸತ್ಕಾರ್ಯಗಳಿಗೆ ದಾನ ಮಾಡುವ ಗುಣ ಪ್ರತಿಯೊಬ್ಬರಲ್ಲಿ ಬೆಳೆಯಬೇಕು. ನಿಸ್ವಾರ್ಥದಿಂದ ಸೇವೆ ಮಾಡಿದರೆ ಮುಂದೊಂದು ದಿನ ಗುರು ಹಿರಿಯರ ಅನುಗ್ರಹಕ್ಕೆ ಪಾತ್ರರಾಗಲು ಸಾಧ್ಯವಿದೆ. ಬಸವ ತತ್ವಪಾಲನೆ ಮಾಡುವವರು ನಿರಂತರ ಕಾಯಕ ದಾಸೋಹ ಜೀವಿಗಳಾಗಿ ಬಾಳಿ ಬದುಕಬೇಕೆಂದು ಅವರು ಹೇಳಿದರು.

ಎಂಜಿನಿಯರ್ ರಾಜಶೇಖರ ಟೋಪಿಗಿ, ವಕೀಲ ಶಂಕರ ಮಟ್ಟೆಪ್ಪನವರ, ಬಸಪ್ಪ ಬಳವಾಡ, ಅಶೋಕ ಡಾಬಳ್ಳಿ, ಲಾಯಪ್ಪ ಮಾಳಶೆಟ್ಟಿ, ಮಚೇಂದ್ರ ಭೋಸಲೆ, ಸಿದರಾಯ ಪುಟಾಣಿ, ರಾಜು ಬಿಸುಗುಪ್ಪಿ, ಸುರೇಶ ಬಂಡಗಾರ, ಯೋಗ ಶಿಕ್ಷಕ ಶ್ರೀಶೈಲ ಪಾಟೀಲ, ಸುರೇಶ ಮೈಗೂರ, ಭರತ ಕಾಂಬಳೆ, ಬಸಗೊಂಡ ಕಾರಜಣಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಕೆಂಪಟ್ಟಿ ಹಾಗೂ ದೇಸಾಯಿ ಸಂಗೀತ ಬಳಗ ವಚನ ಪ್ರಾರ್ಥನೆ ಮಾಡಿದರು. ಎಲ್ಲರಿಗೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ದಾಸೋಹ ಸೇವೆ ಸಲ್ಲಿಸಿದ ವಿವಿಧ ದಾನಿಗಳನ್ನು ಗೌರವಿಸಿ ಸತ್ಕರಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-21-137381367

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.