ಗುರುವಾರ , ಸೆಪ್ಟೆಂಬರ್ 19, 2019
22 °C

‘ಅಥಣಿಯಲ್ಲಿ ಡಿಎಲ್‌ ಕ್ಯಾಂಪ್‌ ಮಾಡಿ’

Published:
Updated:
Prajavani

ಅಥಣಿ: ‘ಆರ್‌ಟಿಒ ಅಧಿಕಾರಿಗಳು ಗಡಿ ತಾಲ್ಲೂಕು ಅಥಣಿಯಲ್ಲಿ ಚಾಲನಾ ಪರವಾನಗಿ (ಡಿಎಲ್‌) ಕ್ಯಾಂಪ್‌ ನಡೆಸಿದರೆ, ಈ ಭಾಗದ ಜನರಿಗೆ ಅನುಕೂಲವಾಗುತ್ತದೆ’ ಎಂದು ಅಥಣಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಪ್ರಶಾಂತ ತೋಡಕರ ತಿಳಿಸಿದ್ದಾರೆ.

‘ತಾಲ್ಲೂಕಿನ ಜನರು ಚಿಕ್ಕೋಡಿಗೆ ಹೋಗಿ ಪರವಾನಗಿ ಪಡೆಯಬೇಕಾದ ಸ್ಥಿತಿ ಇದೆ. ಈ ಕೆಲಸ ಒಂದು ದಿನದಲ್ಲಿ ಆಗುವುದಿಲ್ಲ. ಹೀಗಾಗಿ, ಜನರಿಗೆ ಆಗುತ್ತಿರುವ ತೊಂದರೆ ನಿವಾರಣೆಗೆ ಕ್ರಮ ವಹಿಸಬೇಕು. ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಬೇಕು’ ಎಂದು ಒತ್ತಾಯಿಸಿದ್ದಾರೆ.

 

Post Comments (+)