ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಎ ವಿರೋಧಿಸಿ ಪ್ರತಿಭಟನೆ

Last Updated 29 ಜನವರಿ 2020, 13:26 IST
ಅಕ್ಷರ ಗಾತ್ರ

ಅಥಣಿ: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿಸಿ ವಿವಿಧ ಸಂಘಟನೆಗಳು ಬುಧವಾರ ಅಥಣಿ ಬಂದ್‌ಗೆ ಕರೆ ನೀಡಿದ್ದವು. ಎರಡು ಗಂಟೆಗಳವರೆಗೆ ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್‌ ವೃತ್ತದ ಸಂಕೇಶ್ವರ ಜೇವರ್ಗಿ ರಸ್ತೆ ಪಕ್ಕದಲ್ಲಿ ಬಹಿರಂಗ ಸಭೆ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ವಿರುದ್ಧ ಘೋಷಣೆ ಕೂಗಿದರು.

‘ಧರ್ಮದ ಆಧಾರ ಪೌರತ್ವ ನೀಡಬಾರದು. ಮತ ಹಾಕಿ ಅಧಿಕಾರಕ್ಕೆ ತಂದವರ ಪೌರತ್ವವನ್ನೇ ಪ್ರಶ್ನೆ ಮಾಡುವ ಕಾಯ್ದೆ ಇದಾಗಿದೆ. ನಮ್ಮ ದೇಶ ಭಾವಕ್ಯದ ದೇಶ. ಜನರನ್ನು ಸಂಶಯಾಶ್ಪದವಾಗಿ ಕಾಣುವ ಕಾಯ್ದೆಗಳು ಜಾರಿಯಾಗಬಾರದು. ಕೇಂದ್ರ ಸರ್ಕಾರವು ಸಿಎಎ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಆಯಾಜ್‌ ಮಾಸ್ಟರ್‌, ಗಜಾನನ ಮಂಗಸೂಳಿ, ಸುನೀಲ ಸಂಕ, ಯುಸೂಫ್‌ ಮುಲ್ಲಾ, ಸುನೀಲ ವಾಘಮೋರೆ, ರಾಜೇಂದ್ರ ಐಹೊಳೆ, ಗೌತಮ ಪರಾಂಜಪೆ, ರಸೂಲ ನಂದಗಾಂವ, ಸಂಜೀವ ಕಾಂಬಳೆ, ಮಲ್ಲಿಕಾರ್ಜುನ ಬಾಳಿಕಾಯಿ, ಜುಬೇರಾ ಮುಲ್ಲಾ, ಭೀಮಾ ನನ್ನವರೆ, ರಾಜು ಜಮಖಂಡಿಕರ, ರವಿ ಬಡಕಂಬಿ, ಇರ್ಫಾನ್‌ ತಾಂಬೋಳಿ, ಭೀರಪ್ಪ ಯಕ್ಕಂಚಿ, ರಮೇಶ ಸಿಂದಗಿ, ಅನಿಲ ಭಜಂತ್ರಿ, ಇಮ್ತಿಯಾಜ್‌ ಹಿಪ್ಪರಗಿ, ಎಂ. ಪಟ್ಟಣ, ಮಹಾಂತೇಶ ಬಡಾಗಿ, ಗಜಾನನ ಕಾಂಬಳೆ, ಗೋವಿಂದ ಗಾಡಿಗಡ್ಡವರ, ಜಗದೀಶ ಪೂಜಾರಿ ಇದ್ದರು.

ತಹಶೀಲ್ದಾರ್‌ ಎಂ.ಎನ್. ಬಳಿಗಾರ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT