ಶುಕ್ರವಾರ, ನವೆಂಬರ್ 15, 2019
22 °C

ಸಂಚಾರ ಪೊಲೀಸ್ ಠಾಣೆ ಸ್ಥಾಪಿಸಲು ಆಗ್ರಹ

Published:
Updated:
Prajavani

ಅಥಣಿ: ಪಟ್ಟಣದಲ್ಲಿ ಸಂಚಾರ ಪೊಲೀಸ್ ಠಾಣೆ ಸ್ಥಾಪಿಸುವಂತೆ ಆಗ್ರಹಿಸಿ ಭಾರತೀಯ ಕಿಸಾನ್‌ ಸಂಘ ಅಥಣಿ ಶಾಖೆ ಪದಾಧಿಕಾರಿಗಳು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

‘ಬೆಳೆಯುತ್ತಿರುವ ಈ ಪಟ್ಟಣದಲ್ಲಿ ಟ್ರಾಫಿಕ್ ಜಾಮ್‌ ಸಮಸ್ಯೆ ಜಾಸ್ತಿಯಾಗುತ್ತಿದೆ. ನೂರಾರು ವಾಹನಗಳು ಇಲ್ಲಿ ಸಂಚರಿಸುತ್ತವೆ. ಕಬ್ಬು ಸಾಗಿಸುವ ಟ್ರ್ಯಾಕ್ಟರ್‌, ಲಾರಿಗಳು ಸಂಚಾರ ನಿಯಮ ಪಾಲಿಸುತ್ತಿಲ್ಲ. ಇದೆಲ್ಲದರಿಂದಾಗಿ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹೀಗಾಗಿ, ಸಂಚಾರ ಠಾಣೆ ಮಂಜೂರು ಮಾಡಬೇಕು ಮತ್ತು ಮುಖ್ಯ ವೃತ್ತಗಳಲ್ಲಿ ಟ್ರಾಫಿಕ್‌ ಸಿಗ್ನಲ್ ದೀಪಗಳನ್ನು ಅಳವಡಿಸಬೇಕು’ ಎಂದು ಕೋರಿದರು.

ಪದಾಧಿಕಾರಿಗಳಾದ ಭರಮ ನಾಯಿಕ, ಮಾರುತಿ ಮೋಹಿತೆ, ಪ್ರಶಾಂತ ತೊಡಕರ, ತಿಮ್ಮಯ್ಯ ಪುಜಾರಿ, ಬಸವರಾಜ ಖೇಮಲಾಪುರ, ರವಿ ಭಟ್ಟ, ಸಿದ್ದಾರೂಢ ಮಠಪತಿ, ಪುಟ್ಟು ಹಿರೇಮಠ, ಕಲ್ಲಪ್ಪ ಹಾರೂಗೇರಿ, ಜೈಫಾಲ ಪಾಲಬಾವಿ, ವಿಘ್ನೇಶ ಬಡಿಗೇರ ಇದ್ದರು.

 

ಪ್ರತಿಕ್ರಿಯಿಸಿ (+)