ಶುಕ್ರವಾರ, ನವೆಂಬರ್ 22, 2019
22 °C

492 ಮಂದಿ ಸೇವೆಗೆ ಸಿದ್ಧ

Published:
Updated:
Prajavani

ಬೆಳಗಾವಿ: ಇಲ್ಲಿನ ಮರಾಠಾ ಲಘು ಪದಾತಿದಳ (ಎಂಎಲ್‌ಐಆರ್‌ಸಿ)ದಲ್ಲಿ ತರಬೇತಿ ಪಡೆದು ಸೇನೆಗೆ ಸೇರಲು ಸಜ್ಜಾಗಿರುವ 492 ಮಂದಿ ಪ್ರಶಿಕ್ಷಣಾರ್ಥಿಗಳ (5, 6 ಹಾಗೂ 7/18 ಗ್ರೂಪ್‌) ನಿರ್ಗಮನ ಪಥಸಂಚಲನ ಗುರುವಾರ ನಡೆಯಿತು.

ಇವರು ಶೀಘ್ರವೇ ದೇಶದ ವಿವಿಧೆಡೆ ಕರ್ತವ್ಯಕ್ಕೆ ನಿಯೋಜನೆಗೊಳ್ಳಲಿದ್ದಾರೆ.

ಪಥಸಂಚಲನ ವೀಕ್ಷಿಸಿ, ಗೌರವವಂದನೆ ಸ್ವೀಕರಿಸಿದ ದಳದ ಕರ್ನಲ್‌ ಆಗಿರುವ ಲೆಫ್ಟಿನೆಂಟ್ ಜನರಲ್ ಪಿ.ಜೆ.ಎಸ್. ಪನ್ನು ಮಾತನಾಡಿ, ‘ಸೈನಿಕರ ಜೀವನದಲ್ಲಿ ಶಿಸ್ತು ಹಾಗೂ ಸಮಯಪಾಲನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ತರಬೇತಿಯಲ್ಲಿ ಕಲಿತ ಕೌಶಲವನ್ನು ಕೆಲಸದ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ದೇಶ ಸೇವೆಗೆ ಅರ್ಪಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಅತ್ಯುತ್ತಮ ಪ್ರಶಿಕ್ಷಣಾರ್ಥಿಗಳಿಗೆ ಪಾರಿತೋಷಕ ಪ್ರದಾನ ಮಾಡಿದರು.

ವೀರನಾರಿಯರಾದ ತುಳ್ಸಾ, ಸವಿತಾ, ಲತಾ, ಕಮಲಾ, ವೈಶಾಲಿ ಹಾಗೂ ಸುಜಾತಾ ಅವರನ್ನು ಸತ್ಕರಿಸಲಾಯಿತು.

ಬ್ರಿಗೇಡಿಯರ್‌ ಗೋವಿಂದ ಕಲ್ವಾಡ ಇದ್ದರು.

 

ಪ್ರತಿಕ್ರಿಯಿಸಿ (+)