ಬೈಲಹೊಂಗಲ: ತ್ಯಾಗ, ಬಲಿದಾನ ಹಾಗೂ ಮಾನವೀಯ ಮೌಲ್ಯಗಳ ಸಂದೇಶ ಸಾರುವ ಪವಿತ್ರ ಬಕ್ರೀದ್ (ಈದ್-ಉಲ್-ಅಝಾ)ನ್ನು ನಗರದಲ್ಲಿ ಗುರುವಾರ ಮುಸ್ಲಿಂ ಬಾಂಧವರು ಅತ್ಯಂತ ಭಕ್ತಿ ಭಾವದಿಂದ ಆಚರಿಸಿದರು.

ಜಾಮಿಯಾ ಮಸೀದಿ ಮುಂಭಾಗದಲ್ಲಿ ಬೆಳಿಗ್ಗೆಯಿಂದಲೇ ಮುಸ್ಲಿಮರು ಸೇರಿ ಬಳಿಕ ದೇವರ ನಾಮಘೋಷಗಳ ಮಧ್ಯೆ ಅಂಕಲಗಿ ಕೂಟ, ಬಜಾರ ರಸ್ತೆ, ರಾಯಣ್ಣ ವೃತ್ತ, ಬಸ್ ನಿಲ್ದಾಣ ಹಾಗೂ ಇಂಚಲ ರಸ್ತೆ ಮಾರ್ಗವಾಗಿ ಬೃಹತ್ ಮೆರವಣಿಗೆ ನಡೆಯಿತು.

ಮುಸ್ಲಿಂ ಬಾಂಧವರು ‘ಈದ್ ಮುಬಾರಕ್’ ಎಂದು ಶುಭಾಶಯ ವಿನಿಮಯ ಮಾಡಿಕೊಂಡರು. ಈದ್ಗಾ ಮೈದಾನದಲ್ಲಿ ಸಾಮೂಹಿಕ ನಮಾಜ್ ಸಲ್ಲಿಸಿದರು.

ಧರ್ಮಗುರು ಮುಪ್ತಿ ಅಬ್ಬಾಸಸಾಬ ಮಾತನಾಡಿ, ‘ಈದುಲ್ ಅಝಾ ಹಬ್ಬವು ಪ್ರವಾದಿ ಇಬ್ರಾಹಿಂ ಅವರ ಅಪಾರ ತ್ಯಾಗ ಮತ್ತು ನಿಸ್ವಾರ್ಥ ಬಲಿದಾನದ ಸ್ಮರಣೆಯಾಗಿದೆ. ಮಾನವೀಯತೆ, ಸಮಾನತೆ ಹಾಗೂ ದೇವರ ಮೇಲಿನ ನಂಬಿಕೆಯನ್ನು ಬಲಪಡಿಸುವ ಪವಿತ್ರ ಹಬ್ಬ ಇದಾಗಿದೆ’ ಎಂದು ಹೇಳಿದರು.

ಮೌಲಾನಾ ಮುಫಿಜಸಾಬ ನಮಾಜ್ ನೆರವೇರಿಸಿದರು. ಮೌಲಾನಾ ಜುಬೇರಸಾಬ ಖುತಬಾ ಪಠಿಸಿದರು. ಮೌಲಾನಾ ಮಾಜಸಾಬ, ಮಹಮ್ಮದಸಾಬ ನದಾಫ, ಬಾಬುಸಾಬ ಸಂಗೊಳ್ಳಿ, ಆರ್.ಎ. ಅರಭಾವಿ, ಮಲಿಕಜಾನ ಮುಲ್ಲಾ, ಬುಡ್ಡೇಸಾಬ ದಾಸ್ತಿಕೊಪ್ಪ, ದಾವಲಸಾಬ ಕೊಂಡಗೊಳ್ಳಿ, ಬುಡ್ಡೇಸಾಬ ಮದಲಮಟ್ಟಿ, ಮುಜಫರ್ ಬಾಗವಾನ, ಶಬ್ಬೀರ್ ಕುದರಿ, ಲತೀಫ್ ಹುದ್ದಾರ, ಇಮ್ತಿಯಾಜ್ ನಾಶೀಪುಡಿ, ಮುಜಮ್ಮಿಲ್ ಮುಜಾವರ, ಇಮ್ತಿಯಾಜ್ ಗದಗ, ಆಕೀಬ ಪಟ್ಟಿಹಾಳ, ಶಬ್ಬೀರ್ ಆನೀಗೊಳ, ಜಮೀಲ್ ಸಂಗೊಳ್ಳಿ, ಬಾಬುಸಾಬ ಸುತಗಟ್ಟಿ, ಹಸನ್ ಗೊರವನಕೊಳ್ಳ, ಮೆಹಬೂಬ ಯಕ್ಕುಂಡಿ, ಅಸ್ಲಂ ಒಂಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-21-336493089

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.