ಬೈಲಹೊಂಗಲ: ನಗರದ ದಾನಮ್ಮದೇವಿ ದೇವಸ್ಥಾನದ 17ನೇ ವರ್ಷದ ಜಾತ್ರಾ ಮಹೋತ್ಸವ ಏ.26ರಿಂದ ಮೇ 7ರ ವರೆಗೆ ನಡೆಯಲಿದೆ.

ಏ.26ರಂದು ಬೆಳಿಗ್ಗೆ 6ಕ್ಕೆ ದೇವಿಗೆ ರುದ್ರಾಭಿಷೇಕ, ಕುಂಕುಮಾರ್ಚಣೆ, ಬೆಳಿಗ್ಗೆ 8.45ಕ್ಕೆ ದೊಡವಾಡ ಜಡಿಸಿದ್ದೇಶ್ವರ ಸ್ವಾಮೀಜಿ ಅವರಿಂದ ಷಟಸ್ಥಲ ಧ್ವಜಾರೋಹಣ, ಬೆಳಿಗ್ಗೆ 9.15 ಕ್ಕೆ ಪೌರ ಕಾರ್ಮಿಕರಿಂದ ದೇವಿಗೆ ಪೂಜೆ ಸಲ್ಲಿಸಿ ಜಾತ್ರೆಗೆ ಚಾಲನೆ, ಪ್ರತಿದಿನ ಸಂಜೆ 6.30ರಿಂದ 8.30ರ ವರೆಗೆ ಮುನವಳ್ಳಿ ಮುಕ್ತಾನಂದ ಸ್ವಾಮೀಜಿ ಅವರಿಂದ ‘ಶ್ರೀಗುರು ಸಿದ್ಧಾರೂಢ ಜೀವನಾಮೃತ ಚರಿತ್ರೆ’ ಪ್ರವಚನ ಕಾರ್ಯಕ್ರಮ ನಡೆಯಲಿದೆ.

ಮೇ 6ರ ವರೆಗೆ ಜಾತ್ರೆಯ ವಿವಿಧ ದಿನಗಳಲ್ಲಿ ಸೀಮಂತ ಕಾರ್ಯ, ಉಡಿ ತುಂಬುವುದು, ತೊಟ್ಟಿಲೋತ್ಸವ, ವಿಶೇಷ ಪೂಜೆಗಳು, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಉಪನ್ಯಾಸಗಳು ನಡೆಯಲಿವೆ.

ಮೇ 7ರಂದು ಬೆಳಿಗ್ಗೆ 8ಕ್ಕೆ ಮಹಾಪೂಜೆ, 11ಕ್ಕೆ ಮಹಾಪ್ರಸಾದ, ಸಂಜೆ 5ಕ್ಕೆ ಮಹಾರಥೋತ್ಸವ ನೆರವೇರಲಿದೆ ಎಂದು ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಪ್ರಮೋದಕುಮಾರ ವಕ್ಕುಂದಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-21-1983367652

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.