ಬೈಲಹೊಂಗಲ: ‘ಸಾರ್ವಜನಿಕ ಹಿತಾಸಕ್ತಿ ಬಯಸಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ ಜನರಿಗೆ ಉತ್ತಮ ಸೇವೆ ನೀಡಿದಾಗ ಮಾತ್ರ ಸರ್ಕಾರಿ ಸೇವೆ ಸಾರ್ಥಕವಾಗುತ್ತದೆ’ ಎಂದು ಸಾರಿಗೆ ಘಟಕ ಮಹೇಶ ತಿರಕ್ಕನವರ ಹೇಳಿದರು.

ನಗರದ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಘಟಕದಲ್ಲಿ ಸುಮಾರು 30 ರಿಂದ 40 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಸೇವಾ ನಿವೃತ್ತರಾದ ಎಸ್.ಎಸ್. ಕಲಾಲ, ಕೆ.ಕೆ.ಗೋರೆಖಾನ್, ಎಸ್.ಪಿ.ನೇಗೂರ, ಬಿ.ಆರ್. ಗಂಗಪ್ಪನವರ, ಎನ್.ಎಸ್.ಉಪ್ಪಾರ, ಬಿ.ಎನ್. ಜಾಲಿಗಿಡದ, ಪಿ.ಐ.ನಧಾಪ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಾರಿಗೆ ಸಂಸ್ಥೆಯಲ್ಲಿನ ಕಾರ್ಯ ಅತ್ಯಂತ ಸವಾಲಿನ ಕಾರ್ಯ. ಜಾಗರೂಕತೆಯಿಂದ ನಿರ್ವಹಿಸಿ ನೌಕರರು ಯಶಸ್ವಿಯಾಗಬೇಕು’ ಎಂದರು.

ಸೇವಾ ನಿವೃತ್ತಿ ಹೊಂದಿದ ನಿರ್ವಾಹಕ ಕೆ.ಕೆ. ಗೋರೆಖಾನ್ ಮಾತನಾಡಿ, ‘ಬದುಕಿನಲ್ಲಿ ಸರ್ಕಾರಿ ನೌಕರಿ ಸಿಗಬೇಕಾದರೆ ಯೋಗ ಇರಬೇಕು. ಸಾರ್ವಜನಿಕರ ಸೇವೆ ಮಾಡುವಾಗ ಅಹಂಭಾವ ತೋರದೇ ಸಾಗಿದಾಗ ಮಾತ್ರ ಪ್ರತಿಯೊಬ್ಬರ ಹೃದಯದಲ್ಲಿ ಉಳಿಯಲು ಸಾಧ್ಯ. ಇಲಾಖೆ ನೀಡಿದ ಜವಾಬ್ದಾರಿಗೆ ಸದಾ ಬದ್ಧರಾಗಿ ಪ್ರಾಮಾಣಿಕತೆಯಿಂದ ಸೇವೆ ಮಾಡಿದಾಗ ಮಾತ್ರ ಕೀರ್ತಿಗೆ ಪಾತ್ರರಾಗುತ್ತೇವೆ’ ಎಂದರು.

ಸಂಚಾರ ನಿರೀಕ್ಷಕಿ ಶ್ರೀದೇವಿ ಪಾಶ್ಚಾಪೂರೆ ಮಾತನಾಡಿದರು. ಎಟಿಎಸ್ ಮಂಜುನಾಥ ಆನಿಕಿವಿ, ಸಂಚಾರಿ ಮೇಲ್ವಚಾರಕ ಮಹಾಂತೇಶ ಕಳ್ಳಿ, ನಿವೃತ್ತ ಕಚೇರಿ ಸಿಬ್ಬಂದಿಗಳಾದ ವೈ.ಟಿ.ಬಾಗಾರ, ಯು.ಎನ್.ಸಂಕಣ್ಣವರ, ಹಿರಿಯ ಸಿಬ್ಬಂದಿ ಮೇಲ್ವಚಾರಕ ಸಿ.ಜಿ.ಬೆಂಡಿಗೇರಿ, ಹಿರಿಯ ಸಹಾಯಕಿ ರೇಣುಕಾ ಹುಲಕುಂದ, ಸಂಸ್ಥೆ ಕಾರ್ಮಿಕ ಮುಖಂಡ ಸುರೇಶ ಯರಡ್ಡಿ, ನಿವೃತ್ತ ಸಂಚಾರಿ ನಿಯಂತ್ರಕರಾದ ಚಂದ್ರಶೇಖರ ಹಿರೇಮಠ, ಸುನೀಲ ಕುಲಕರ್ಣಿ, ಬೀಮಣ್ಣ ಮಾಲಬಣ್ಣವರ, ಶಿವಾನಂದ ವನಜಾಲಿ, ಜಿ.ಡಿ. ಕಟ್ಟಿಮನಿ, ನಿವೃತ್ತ ಕಾರ್ಮಿಕ ಮುಖಂಡ ಬಿ.ಬಿ. ಸಂಗನಗೌಡರ ಇದ್ದರು.

ವಿನೋದ ಹೂಗಾರ ಸ್ವಾಗತಿಸಿದರು. ನಿರ್ವಾಹಕ ನಾಗೇಂದ್ರ ಮುರಗೋಡ ವಂದಿಸಿದರು. ಸೇವಾ ನಿವೃತ್ತರಾದ ಚಾಲಕ, ನಿರ್ವಾಹಕರನ್ನು ಇಲಾಖೆಯಿಂದ, ಕುಟುಂಬಸ್ಥರು, ಗೆಳೆಯರ ಬಳಗ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ನೌಕರರ ವರ್ಗ ಅಭಿಮಾನದಿಂದ ಸತ್ಕರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-21-1547824436

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.