ಬೈಲಹೊಂಗಲ: ನಗರದ ಮಲಪ್ರಭಾ ಆಸ್ಪತ್ರೆಯಲ್ಲಿ ಪ್ರಸಿದ್ಧ ಎಲುಬು ಹಾಗೂ ಕೀಲು ತಜ್ಞ ಡಾ.ಮಂಜುನಾಥ ಮುದಕನಗೌಡರ ನೇತೃತ್ವದ ವೈದ್ಯರ ತಂಡ ಹಿಪ್ ರಿಪ್ಲೇಸ್ಮೆಂಟ್, ನೀ ರಿಪ್ಲೇಸ್ಮೆಂಟ್ ಹಾಗೂ ಬೆನ್ನು ಮೂಳೆ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸಿದೆ.

ತಂಡದಲ್ಲಿ ಅರಿವಳಿಕೆ ತಜ್ಞರಾದ ಡಾ.ಮಹಾಂತೇಶ ಜಿಡ್ಡಿಮನಿ, ಡಾ.ಪ್ರಸಾದ ಮುದಕನಗೌಡರ, ಡಾ.ಸೂರಜ್ ಮತ್ತಿಕೊಪ್ಪ ಸಹಕರಿಸಿದರು. ವಿಜಯಪುರದ 67 ವರ್ಷದ ವ್ಯಕ್ತಿಗೆ ಮೊಣಕಾಲು ಬದಲಾವಣೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 45 ವರ್ಷದ ಮಹಿಳೆಗೆ ಬೆನ್ನು ಮೂಳೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. 40 ವರ್ಷದ ಮಹಿಳೆಗೆ ಪೃಷ್ಟದ ಕೀಲಿಗೆ ರಕ್ತಸಂಚಾರ ಕಡಿಮೆಯಾಗಿದ್ದ ಸಮಸ್ಯೆಗೆ ನೂತನ ಮಾದರಿ ಹಿಪ್ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು ಆರೋಗ್ಯ ಸುಧಾರಿಸಿದೆ.

ಬೈಲಹೊಂಗಲ ನಗರ ಪ್ರದೇಶದಲ್ಲಿ ಇಂತಹ ಅತ್ಯಾಧುನಿಕ ಶಸ್ತ್ರಚಿಕಿತ್ಸೆಗಳು ವಿರಳವಾಗಿದ್ದು, ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಈ ಚಿಕಿತ್ಸೆಗಗಳನ್ನು ಕೈಗೊಳ್ಳಲಾಗಿದೆ ಎಂದು ಡಾ. ಮಂಜುನಾಥ ಮುದಕನಗೌಡರ ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಬಡವರಿಗೂ ಅನುಕೂಲವಾಗುವಂತೆ ಯಶಸ್ವಿನಿ, ಆಯುಷ್ಮಾನ್ ಭಾರತ, ಕರ್ನಾಟಕ ಆರೋಗ್ಯ ಸಂಜೀವಿನಿ ಸೇರಿದಂತೆ ವಿವಿಧ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ವಿಮೆ ಯೋಜನೆಗಳ ಸೌಲಭ್ಯ ಲಭ್ಯವಿದೆ. ಶೀಘ್ರದಲ್ಲೇ ಆರ್ಥೋಸ್ಕೋಪಿ, ಪ್ಲಾಸ್ಟಿಕ್ ಸರ್ಜರಿ, ಯೂರಾಲಜಿ ಹಾಗೂ ಕ್ಯಾಥ್ಲ್ಯಾಬ್ ಸೇವೆಗಳನ್ನೂ ಆರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸಾರ್ವಜನಿಕರು ಈ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ವೈದ್ಯರು ಮನವಿ ಮಾಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-21-1755891237

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.