ಬೈಲಹೊಂಗಲ: ಬೈಲಹೊಂಗಲ-ಮುರಗೋಡ ರಸ್ತೆಯ ಮರಕುಂಬಿ ಗ್ರಾಮದ ಹಾರುಗೊಪ್ಪ ಕ್ರಾಸ್ ಹತ್ತಿರ ಹಾಯ್ದು ಹೋಗಿರುವ ಹೈದರಾಬಾದ್ -ಪಣಜಿ ಗ್ರೀನ್ ಕಾರಿಡಾರ್ ಹೆದ್ದಾರಿಯಲ್ಲಿ ರೈತವರ್ಗಕ್ಕೆ ಅವಶ್ಯ ದಾರಿಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರ್ತಿಕ ಪಾಟೀಲ ನೇತೃತ್ವದಲ್ಲಿ ಕಾಮಗಾರಿ ಸ್ಥಳದಲ್ಲಿ ಶುಕ್ರವಾರ ರೈತರು ಉಗ್ರ ಪ್ರತಿಭಟಣೆ ನಡೆಸಿದರು.

ಕೇಂದ್ರ ಸರ್ಕಾರ ಅಡಿಯಲ್ಲಿ ನಿರ್ಮಾಣ ಮಾಡುತ್ತಿರುವ ಹೈದರಾಬಾದ್ -ಪಣಜಿ ನೂತನ ರಸ್ತೆ ಕಾಮಗಾರಿ ಈಗಾಗಲೇ ಪ್ರಾರಂಭಗೊಂಡಿದೆ. ಹೆಚ್ಚಾಗಿ ಜಮೀನುಗಳ ಮುಖಾಂತರವೇ ಹಾಯ್ದುಹೋಗಿದ್ದು ರೈತಾಪಿ ಜನರಿಗೆ ಬೇರೆ ಬೇರೆ ಹೊಲಗಳಿಗೆ ತೆರಳಲು ಅಂಡರಪಾಸ್ ಹಾಗೂ ಸರ್ವಿಸ್ ರಸ್ತೆ ನೀಡದೇ ಬೃಹದಾಕಾರ ಎತ್ತರ ರಸ್ತೆಯ ಕಾಮಗಾರಿ ಮಾಡುವದರಿಂದ ಭವಿಷ್ಯದಲ್ಲಿ ಹಲವಾರು ಸಮಸ್ಯಗಳು ಎದುರಾಗಲಿವೆ ಎಂದು ನೂರಾರು ರೈತರು ತಮ್ಮ ತಮ್ಮ ಸಮಸ್ಯೆಗಳನ್ನು ಅರಿತು ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಿದರು.

ಹೆದ್ದಾರಿಯ ಒಂದು ಬದಿಯಿಂದ ಇನ್ನೊಂದು ಬದಿಗೆ ಸುರಕ್ಷಿತವಾಗಿ ಸಂಚರಿಸಲು ಅಂಡರಪಾಸ್ ಸೌಲಭ್ಯ ಇಲ್ಲದಿರುವುದರಿಂದ ಅಪಘಾತಗಳ ಭೀತಿ ಜನರನ್ನು ಕಾಡುತ್ತಿದೆ. ಕೃಷಿ ಚಟುವಟಿಕೆಗಳು, ಕಬ್ಬು ಸಾಗಾಣಿಕೆ, ವಾಹನಗಳ ಸಂಚಾರ ಹಾಗೂ ಇತರೇ ಅಗತ್ಯ ಕೆಲಸಗಳಿಗಾಗಿ ಗ್ರಾಮಸ್ಥರು ಹೆದ್ದಾರಿ ದಾಟುವ ಸಂದರ್ಭ ಅನೇಕಾನೇಕ ಸಮಸ್ಯಗಳನ್ನು ಎದುರಿಸಬೇಕಾಗುತ್ತದೆ. ಜೊತೆಗೆ ಒಂದು ರಸ್ತೆ ಸೇತುವೆಯಿಂದ ಮತ್ತೋಂದು ಸೇತುವೆ ಹಳ್ಳಕ್ಕೆ ಎರಡೆರಡು ಕೀ.ಮೀ ಅಂತರವಿದ್ದು ಇವೆಲ್ಲ ಅಂಶಗಳು ತುಂಬಾ ತೊಂದರೆ ಒಡ್ಡಲಿವೆ. ಹೀಗಾಗಿ ಅನುಕೂಲದ ದೃಷ್ಟಿಯಲ್ಲಿ ಸರ್ಕಾರ ಮೇಲೆ ಹಾಗೂ ರಸ್ತೆ ಗುತ್ತಿಗೆ ಹಿಡಿದವರ ಎಜೆನ್ಸಿ, ರಾಷ್ಟ್ರೀಯ ಹೆದ್ದಾರಿ ಇಲಾಖಾ ಅಧಿಕಾರಿಗಳ ಮೇಲೆ ಒತ್ತಡ ತರಲು ಟ್ಯ್ರಾಕ್ಟರ್, ಚಕ್ಕಡಿ, ಎತ್ತುಗಳ ಮೂಲಕ ಅನೇಕ ರೈತರು, ವಿವಿಧ ಸಂಘಟನೆಗಳು ನೂರಾರು ಪದಾಧಿಕಾರಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸಿ ರಸ್ತೆಯಲ್ಲಿ ಹೋರಾಟ ನಡೆಸಿದರು. ಮುಂಜಾನೆ 10 ಕ್ಕೆ ಆರಂಭಗೊಂಡ ಪ್ರತಿಭಟನೆ ಹೊತ್ತೇರಿದಂತೆ ಚುರುಕು ಪಡೆಯಿತು.

ಮುರಗೋಡ ಬೈಲಹೊಂಗಲ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಪರ ಊರುಗಳಿಗೆ, ಮರಕುಂಬಿ ಶ್ರೀ ಚಕ್ರ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳುವ ಭಕ್ತಾರಿಗೆ, ತುರ್ತು ಸೇವೆ ಇದ್ದವರಿಗೆ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಮುರಗೋಡ ಸಿಪಿಐ .ಐ.ಎಂ.ಮಠಪತಿ ಯಾವುದೇ ಅಹಿತಕರ ಘಟನೆಗಳಾಗದಂತೆ ಸೂಕ್ತ ಬಂದೋ ಬಸ್ತ್ ಒದಗಿಸಿದ್ದರು.

ಶಾಸಕ ಮಹಾಂತೇಶ ಕೌಜಲಗಿ, ಎಸಿ ಪ್ರವೀಣ ಜೈನ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರ್ತಿಕ ಪಾಟೀಲ ಎನ್.ಎಚ್.ಹಾಯವೇ 748 ರ ರೆಸಿಡೆಂಟ್ ಎಂಜನಿಯರ್ ಭೀಮಶಿ ಎಂ.ಬಿ. ಅವರಿಗೆ ಪ್ರತಿಭಟನಾ ನಿರತರು ಮನವಿ ಸಲ್ಲಿಸಿದರು. ಗ್ರಾ.ಪಂ. ಮಾಜಿ ಅಧ್ಯಕ್ಷ ಸುರೇಶ ಮುರಗೋಡ, ಕರುನಾಡ ರಕ್ಷಣಾ ವೇದಿಕೆಯ ಉತ್ತರ ಕರ್ನಾಟಕದ ರೈತ ಘಟಕದ ರಾಜ್ಯಾಧ್ಯಕ್ಷ ಅಪ್ಪಾಸಾಹೇಬ ಲಕ್ಕಂಡಿ, ಮಲ್ಲಿಕಾರ್ಜುನ ಗುರುಕನವರ, ಸೋಮಪ್ಪ ಬೈಲವಾಡ, ಫಕ್ರುಸಾಬ್ ಮುಜಾವರ, ಈರಣ್ಣ ಅಂಬಡಗಟ್ಟಿ, ಮಲ್ಲಿಕಾರ್ಜುನ ತಿಗಡಿ, ಶಿವಪ್ಪ ಗುರುಕನವರ, ಸತೀಶ ಚಿಕ್ಕಮಠ, ಮಹಾಂತೇಶ ಮಾವಿನಕಟ್ಟಿ, ರೇವಪ್ಪ ತಿಗಡಿ, ಪ್ರಶಾಂತ ಮುರಕೀಭಾಂವಿ, ಮಡಿವಾಳಪ್ಪ ಅಕ್ಕಿಸಾಗರ, ಶಂಕರ ತೋಟಗಿ ಇದ್ದರು. ಸುತ್ತಮುತ್ತಲಿನ ಅನೇಕ ರೈತರು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-21-335723398

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.