ಬೈಲಹೊಂಗಲ: ‘ಪ್ರತಿಯೊಬ್ಬ ಪೊಲೀಸರು ಜನ ಸಾಮಾನ್ಯರೊಂದಿಗೆ ಬೆರೆತು ಸೇವಾ ಮನೋಭಾವದಿಂದ ಕೆಲಸ ಮಾಡಿದಾಗ ಮಾತ್ರ ಜನಸ್ನೇಹಿ ಪೊಲೀಸರಾಗಿ ಹೊರಹೊಮ್ಮಲು ಸಾಧ್ಯವಿದೆ’ ಎಂದು ಡಿವೈಎಸ್ಪಿ ವೀರಯ್ಯ ಹಿರೇಮಠ ಹೇಳಿದರು.

ನಗರದ ಪೊಲೀಸ್ ಇಲಾಖೆಯಲ್ಲಿ ಶನಿವಾರ ನಡೆದ ಪ್ರೋಪೇಷನರಿ ಐಪಿಎಸ್ ಅಧಿಕಾರಿ ಭಾನುಪ್ರಕಾಶ ಜೆ. ಅವರಿಗೆ ಬೀಳ್ಕೊಡುಗೆ, ಸತ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಐಪಿಎಸ್ ಭಾನುಪ್ರಕಾಶ ಅವರು ಯಾವುದೇ ಶ್ರೀಮಂತ ಕುಟುಂಬದಿಂದ ಬಂದಿಲ್ಲ. ರೈತಾಪಿ ವರ್ಗದಿಂದ ಬಂದಿದ್ದಾರೆ. ಮೂರು ಭಾರಿ ಯುಪಿಎಸ್ಸಿ ಪಾಸಾಗಿದ್ದಾರೆ. ಭಾರತೀಯ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಐಪಿಎಸ್ ಹುದ್ದೆ ಬಹುದೊಡ್ಡದು. ಈ ಹುದ್ದೆಗೆ ಬರಬೇಕಾದರೆ ಸತತ ಪ್ರಯತ್ನ, ಗುರಿ, ತಾಳ್ಮೆ, ಆಸಕ್ತಿ ಇರಬೇಕು. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಸಾಕಷ್ಟು ಘಟಾನುಘಟಿ ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಅವರೆಲ್ಲರೂ ಬಹಳ ದೊಡ್ಡ ಸ್ಥಾನದಲ್ಲಿದ್ದಾರೆ. ಐಪಿಎಸ್ ಭಾನುಪ್ರಕಾಶ ಅವರಿಗೂ ದೊಡ್ಡ ಹುದ್ದೆ ಸಿಗಲಿ’ ಎಂದು ತಿಳಿಸಿದರು.

ಪ್ರೋಪೇಷನರಿ ಐಪಿಎಸ್ ಭಾನುಪ್ರಕಾಶ ಮಾತನಾಡಿ, ‘ತರಬೇತಿ ಅವಧಿಯಲ್ಲಿ ಮಾರ್ಗದರ್ಶನ, ಸಹಕಾರ ನೀಡಿದ ಎಲ್ಲ ಹಿರಿಯ, ಕಿರಿಯ ಅಧಿಕಾರಿಗಳು, ಸಿಬ್ಬಂದಿಗೆ, ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸಿದ ಜನತೆಗೆ ಅಭಿನಂದೆ’ ಎಂದು ತಿಳಿಸಿದರು.

ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್ಐ ಸಂತೋಷ ಮಾತನಾಡಿದರು. ಸಿಪಿಐಗಳಾದ ಪ್ರಮೋದ ಯಲಿಗಾರ, ಗಜಾನನ ನಾಯಕ, ಪಿಎಸ್ಐ ಎಫ್.ವೈ.ಮಲ್ಲೂರ, ಪೌರಾಯುಕ್ತೆ ಭಾಗ್ಯಶ್ರೀ ಹುಗ್ಗಿ, ಡಾ.ಚೇತನಾ ಭಾನುಪ್ರಕಾಶ, ಹಿರಿಯ ಪತ್ರಕರ್ತ ಮಹಾಂತೇಶ ತುರಮರಿ, ಪಿಎಸ್ಐಗಳಾದ ಶಿವಲಿಂಗ ಭಾವಿಕಟ್ಟಿ, ಬಸವರಾಜ ಜ್ವಾಲಾಪೂರೆ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-21-1738536693

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.