ಸತ್ತಿಗೇರಿ: ‘ಇಡೀ ಪ್ರಪಂಚದಲ್ಲಿ ಬಸವ ತತ್ವಗಳು ಪ್ರಸಾರವಾಗಿವೆ ಎಂಬುದಕ್ಕೆ ಇಂಗ್ಲೆಂಡ್ನ ಪಾರ್ಲಿಮೆಂಟ್ ಮುಂದೆ ಬಸವಣ್ಣನ ಪುತ್ಥಳಿ ಸ್ಥಾಪಿಸಲಾಗಿರುವುದೇ ಸಾಕ್ಷಿ’ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಸಮೀಪದ ಸೊಪ್ಪಡ್ಲ ಗ್ರಾಮದಲ್ಲಿ ಬಸವೇಶ್ವರ ವೃತ್ತದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಶ್ವಾರೂಢ ಬಸವೇಶ್ವರ ಕಂಚಿನ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದರು.

ಬೆಳಗಾವಿ ಮಾಜಿ ಸಂಸದ ಎ.ಕೆ. ಕೊಟ್ರಶೆಟ್ಟಿ ಮಾತನಾಡಿ, ‘ಬಸವಣ್ಣನ ತತ್ವಗಳು ಸಮಾಜದಲ್ಲಿ ಸಮಾನತೆ ಸಾರುತ್ತವೆ. ನಿತ್ಯ ಜೀವನದಲ್ಲಿ ಅವುಗಳನ್ನು ಅನುಸರಿಸಿದರೆ 12ನೇ ಶತಮಾನದ ಶರಣ ಪರಂಪರೆ ಮರುಕಳಿಸುತ್ತದೆ’ ಎಂದು ಹೇಳಿದರು.

ಭೂ ನ್ಯಾಯ ಮಂಡಳಿ ಸದಸ್ಯ ಈರಣ್ಣ ಗೌಡರ ಮಾತನಾಡಿ, ‘ಸೊಪ್ಪಡ್ಲ ಗ್ರಾಮದ ಜನ ದೊಡ್ಡ ಅಶ್ವಾರೂಢ ಬಸವೇಶ್ವರ ಮೂರ್ತಿ ಪ್ರತಿಷ್ಠಾಪಿಸಿ ದೇಶವೇ ಮೆಚ್ಚುವಂಥ ಕಾರ್ಯ ಮಾಡಿದ್ದಾರೆ’ ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶ್ರೀಶೈಲ ಕೊಟ್ರಶೆಟ್ಟಿ, ಪ್ರಕಾಶ ವಾಲಿ, ಮಹಾಂತೇಶ ಉರಬಿನ್ನವರ, ವೀರೇಶ ಬ್ಯಾಹಟ್ಟಿ, ಗೌಡಪ್ಪ ಕಮಗೌಡರ, ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ಶೇಖಪ್ಪ ಹರಳಿ, ಚಂದ್ರಶೇಖರ ಅಂಗಡಿ, ಗುರುಲಿಂಗಯ್ಯ ಹಿರೇಮಠ, ಐ.ಕೆ. ಗೌಡರ, ಮಹಾಂತೇಶ ಕತ್ತಿ, ವಿಜಯ ಅಂಗಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-21-1121269372

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.