ಅಥಣಿ (ಬೆಳಗಾವಿ ಜಿಲ್ಲೆ): 2025ನೇ ಸಾಲಿನ ಭಾರತೀಯ ಅರಣ್ಯ ಸೇವೆ ಪರೀಕ್ಷೆಯ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ಅಥಣಿ ತಾಲ್ಲೂಕಿನ ಸವದಿಯ ಬಸವರಾಜ ಕೆಂಪವಾಡ(25) ದೇಶಕ್ಕೆ ಪ್ರಥಮ ರ್ಯಾಂಕ್ ಗಳಿಸಿದ್ದಾರೆ.

ಸವದಿಯ ಖಾಸಗಿ ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆ, ರಾಯಬಾಗ ತಾಲ್ಲೂಕಿನ ಅಳಗವಾಡಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6ರಿಂದ 10ನೇ ತರಗತಿಯವರೆಗೆ ಬಸವರಾಜ ಅಭ್ಯಸಿಸಿದರು.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಯಲ್ಲಟ್ಟಿಯಲ್ಲಿ ಪಿಯುಸಿ, ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಬಿ.ಎಸ್ಸಿ(ಅರಣ್ಯ) ಓದಿದರು. ನಂತರ ಬೆಂಗಳೂರಿಗೆ ತೆರಳಿ ಸ್ವಯಂ ಅಧ್ಯಯನ ಕೈಗೊಂಡಿದ್ದರು.

ಬಸವರಾಜ ಅವರದ್ದು ಕೃಷಿ ಕುಟುಂಬ. ಮೂರುವರೆ ಎಕರೆ ಜಮೀನಿದೆ. ಕಿರಿಯ ಮಗನ ಸಾಧನೆ ಇಡೀ ಕುಟುಂಬದಲ್ಲಿ ಸಂತಸ ಮೂಡಿಸಿದೆ.

‘ಕಳೆದ ಬಾರಿ ಐಎಫ್ಎಸ್ ಪೂರ್ವಭಾವಿ ಪರೀಕ್ಷೆಯಲ್ಲೂ ಬಸವರಾಜ ಉತ್ತೀರ್ಣವಾಗಿರಲಿಲ್ಲ. ಆದರೆ, ಛಲ ಬಿಡದೆ ಓದಿ, ಈಗ ಇಡೀ ದೇಶಕ್ಕೆ ಮೊದಲ ಸ್ಥಾನ ಗಳಿಸಿದ್ದು ಖುಷಿ ತಂದಿದೆ. ಪ್ರಯತ್ನಪಟ್ಟರೆ ಯಾವುದೂ ಅಸಾಧ್ಯವಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಐಎಎಸ್ ಅಧಿಕಾರಿಯಾಗಬೇಕು ಎಂಬ ಕನಸಿನೊಂದಿಗೆ ಅಧ್ಯಯನ ಮುಂದುವರಿಸಿದ್ದಾನೆ’ ಎಂದು ಮೈಸೂರು ನಗರ ಸಶಸ್ತ್ರ ಮೀಸಲು ಪಡೆಯಲ್ಲಿ ಕಾನ್ಸ್ಟೆಬಲ್ ಆಗಿರುವ ಹಿರಿಯ ಸಹೋದರ ಸಿದ್ದು ಕೆಂಪವಾಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.