ಸತ್ತಿಗೇರಿ: ಯರಗಟ್ಟಿ ತಾಲ್ಲೂಕಿನ ಆಲದಕಟ್ಟಿ ಕೆ.ಎಂ. ಗ್ರಾಮದಲ್ಲಿ ಭಾನುವಾರ, ತನ್ನ ಮಗುವನ್ನು ವಿಡಿಯೊ ಕಾಲ್ನಲ್ಲಿ ತೋರಿಸಲಿಲ್ಲ ಎಂಬ ಕಾರಣಕ್ಕೆ ಅಳಿಯ ಅತ್ತೆಯ ಹೊಟ್ಟೆಗೆ ಚಾಕು ಇರಿದಿದ್ದಾನೆ. ಗಂಭೀರ ಗಾಯಗೊಂಡ ಅತ್ತೆಯನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹುಬ್ಬಳ್ಳಿ ತಾಲ್ಲೂಕಿನ ಮಂಟೂರ ಗ್ರಾಮದ ಅರವಿಂದ ಗವಳಿ (26) ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಗಾಯಗೊಂಡ ಮಹಾದೇವಿ ಕರಿಗಾರ (45) ಅವರನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಿದ್ದು, ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರ ವೈದ್ಯರು ಮಾಹಿತಿ ನೀಡಿದ್ದಾರೆ.

ಎರಡೂವರೆ ವರ್ಷಗಳ ಹಿಂದೆ ಮಹಾದೇವಿ ಅವರು ತಮ್ಮ ಮಗಳನ್ನು ಅರವಿಂದ ಗವಳಿಗೆ ಮದುವೆ ಮಾಡಿ ಕೊಟ್ಟಿದ್ದರು. ಆರಂಭದಲ್ಲಿ ದಂಪತಿ ಚೆನ್ನಾಗಿಯೇ ಇದ್ದರು. ಕಳೆದೊಂದು ವರ್ಷದಿಂದ ಅರವಿಂದ ಅವರು ತಮ್ಮ ಹೆತ್ತವರೊಂದಿಗೆ ಜಗಳವಾಡಿಕೊಂಡು ಹುಬ್ಬಳ್ಳಿಯ ನವನಗರದಲ್ಲಿ ಪ್ರತ್ಯೇಕ ಮನೆ ಮಾಡಿಕೊಂಡಿದ್ದ ಎಂದು ಮುರಗೋಡ ಪಿಎಸ್ಐ ವಿವರಿಸಿದರು.

ಕೆಲ ತಿಂಗಳ ಹಿಂದೆ ಈ ದಂಪತಿಗೆ ಮಗು ಜನಿಸಿತ್ತು. ಮಗುವನ್ನು ನೋಡಿಕೊಂಡು ಹೋಗಿದ್ದ ಅರವಿಂದ; ಪದೇಪದೇ ವಿಡಿಯೊ ಕರೆ ಮಾಡಿ ಮಗುವನ್ನು ತೋರಿಸುವಂತೆ ಪೀಡಿಸುತ್ತಿದ್ದ. ಮಗಳಿಗೆ ಹಾಗೂ ಹಸುಗೂಸಿಗೆ ಇದರಿಂದ ತೊಂದರೆ ಆಗುತ್ತದೆ ಎಂದು ಅತ್ತೆ ಬುದ್ಧಿವಾದ ಹೇಳಿದ್ದರು.

ಇದೇ ಕಾರಣಕ್ಕೆ ಅತ್ತೆ– ಅಳಿಯನ ಮಧ್ಯೆ ವಾಗ್ವಾದ ಕೂಡ ಆಗಿತ್ತು. ಅವಾಚ್ಯ ಶಬ್ದಗಳಿಂದ ಅತ್ತೆಯನ್ನು ನಿಂದಿಸಿದ್ದ. ಇದರಿಂದ ಕೋಪಗೊಂಡ ಅತ್ತೆ; ನಮ್ಮೂರಿಗೆ ಬರಬೇಡ, ಬಂದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.

ಭಾನುವಾರ ಸಂಜೆಗೇ ಆಲದಕಟ್ಟಿ ಗ್ರಾಮಕ್ಕೆ ಬಂದ ಅಳಿಯ ಮನೆ ಮುಂದೆಯೇ ನಿಂತು ಅತ್ತೆ ಜತೆಗೆ ಜಗಳ ಶುರು ಮಾಡಿದ. ಮಾತಿನ ಮಧ್ಯೆಯೇ ತನ್ನ ಜೇಬಿನಲ್ಲಿ ಇಟ್ಟುಕೊಂಡಿದ್ದ ಚಾಕು ತೆಗೆದು ಮಹಾದೇವಿ ಅವರ ಹೊಟ್ಟೆಗೆ ಚುಚ್ಚಿ ಪರಾರಿಯಾದ. ರಕ್ತದ ಮಡುವಿನಲ್ಲಿ ಬಿದ್ದ ಮಹಾದೇವಿ ಅವರನ್ನು ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿದರು.

ಪರಾರಿಯಾಗಿದ್ದ ಅಳಿಯನನ್ನು ಪೊಲೀಸರು 24 ಗಂಟೆಯೊಳಗೇ ಬಂಧಿಸಿದರು. ಚಾಕು ಇರಿದು ಪರಾರಿಯಾಗಿದ್ದ ಅಳಿಯ ‘ಇವತ್ತು ಜೈಲು, ನಾಳೆ ಬೇಲು, ನಿನ್ನನ್ನು ಮಾತ್ರ ಬಿಡುವ ಮಾತೇ ಇಲ್ಲ. ನೆನಪಿಟ್ಟುಕೋ. ವೇಟ್ ಅಂಡ್ ಸೀ’ ಎಂದು ಬೆದರಿಕೆ ಸಂದೇಶವನ್ನು ತನ್ನ ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಹಾಕಿಕೊಂಡಿದ್ದ. ಕುಟುಂಬದವರು ತಿಳಿಸಿದ ಬಳಿಕ ಪೊಲೀಸರು ಮೊಬೈಲ್ ಅನ್ನೂ ವಶಕ್ಕೆ ಪಡೆದಿದ್ದಾರೆ ಎಂದು ಮುರಗೋಡ ಪಿಎಸ್ಐ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-21-1254836793

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.