ಬೆಳಗಾವಿ: ‘ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿಯೇ ಉಪ ಮಾರುಕಟ್ಟೆ ಸ್ಥಾಪನೆಗೆ ಲಿಖಿತ ಮನವಿ ಸಲ್ಲಿಸಿದರೆ ಅದನ್ನು ಸರ್ಕಾರದ ಗಮನಕ್ಕೆ ತರುತ್ತೇನೆ. ಕಾಯ್ದೆ ಚೌಕಟ್ಟಿನಲ್ಲಿ ಏನು ಸಾಧ್ಯವಿದೆಯೋ ಮಾಡಬಹುದು. ತರಕಾರಿ ವ್ಯಾಪಾರಿಗಳು ಆತಂಕ ಪಡಬೇಡಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ವ್ಯಾಪಾರಿಗಳು ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ನಿಮ್ಮ ನೋವು ನಮಗೆ ಅರ್ಥವಾಗುತ್ತದೆ. ಆದರೆ, ಕಾನೂನಿನ ಚೌಕಟ್ಟಿನಲ್ಲಿಯೇ ಪರಿಹಾರ ಹುಡುಕಬೇಕು’ ಎಂದರು.

‘ಉಪ ಮಾರುಕಟ್ಟೆ ಪ್ರಸ್ತಾವ ಕಾನೂನುಬದ್ಧವಾಗಿ ಮುಂದುವರಿಯದಿದ್ದರೆ ಅಥವಾ ಅನುಮೋದನೆ ಸಿಗದಿದ್ದರೆ, ಎಪಿಎಂಸಿ ಪ್ರಾಂಗಣದಲ್ಲಿ ಮಳಿಗೆ ಹಂಚಿಕೆ ಮಾಡುವುದು ಅನಿವಾರ್ಯ ಆಗಬಹುದು. ಮಳಿಗೆ ಹಂಚಿಕೆ ಸಂದರ್ಭದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಆಗ ವ್ಯಾಪಾರಸ್ಥರು ಅವಕಾಶ ಪಡೆದುಕೊಳ್ಳಬೇಕು’ ಎಂದೂ ಸಮಾಧಾನ ಹೇಳಿದರು.

‘ಬೆಳಗಾವಿ ಎಪಿಎಂಸಿ ಮಾರುಕಟ್ಟೆ ವಿವಾದ ಕೇವಲ ಮಳಿಗೆ ಹಂಚಿಕೆ ಅಥವಾ ಲೈಸನ್ಸ್ ಸಮಸ್ಯೆಯಾಗಿ ಉಳಿದಿಲ್ಲ. ಇದು ಈಗ ನೂರಾರು ಸಣ್ಣ ವ್ಯಾಪಾರಸ್ಥರ ಬದುಕು, ಅವರ ಕುಟುಂಬಗಳ ಅನ್ನದ ಬಟ್ಟಲು ಮತ್ತು ಮಕ್ಕಳ ಭವಿಷ್ಯದ ಪ್ರಶ್ನೆಯಾಗಿ ರೂಪುಗೊಂಡಿದೆ’ ಎಂದು ವ್ಯಾಪಾರಿಗಳು ಸಚಿವರ ಗಮನಕ್ಕೆ ತಂದರು.

ಸಭೆಯಲ್ಲಿದ್ದ ಜೈ ಕಿಸಾನ್ ಖಾಸಗಿ ಮಾರುಕಟ್ಟೆಯ ವ್ಯಾಪಾರಸ್ಥರು ತಮ್ಮ ಸಂಕಷ್ಟವನ್ನು ಕಣ್ಣೀರಿನೊಂದಿಗೆ ಬಿಚ್ಚಿಟ್ಟರು. ಇದರಿಂದ ಕೆಲಕಾಲ ಸಭೆಯಲ್ಲಿ ಮೌನ ಆವರಿಸಿತು. ವರ್ಷಗಳಿಂದ ತರಕಾರಿ, ಹಣ್ಣು, ಸಣ್ಣಪುಟ್ಟ ವಸ್ತುಗಳ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ ವರ್ತಕರು, ಮಾರುಕಟ್ಟೆ ವ್ಯವಸ್ಥೆಯ ಬದಲಾವಣೆಯಿಂದ ತಮ್ಮ ಬದುಕು ಅತಂತ್ರವಾಗಿದೆ ಎಂದು ನೋವು ತೋಡಿಕೊಂಡರು.

ಖಾಸಗಿ ಮಾರುಕಟ್ಟೆಯ ಪರವಾಗಿ ಮಾತನಾಡಿದ ಅಬ್ದುಲ್ ಕರೀಮ್ ಭಾಗವಾನ್, ‘ಲೈಸನ್ಸ್ ರದ್ದಾದ ನಂತರ ನೂರಾರು ವ್ಯಾಪಾರಸ್ಥರು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ವ್ಯಾಪಾರ ನಿಂತರೆ ನಮ್ಮ ಮನೆಗಳ ಅಡುಗೆಮನೆ ಬಂದ್ ಆಗುತ್ತದೆ. ಮಕ್ಕಳ ವಿದ್ಯಾಭ್ಯಾಸ, ಕುಟುಂಬದ ಖರ್ಚು, ಸಾಲದ ಬಾಧೆ ಎಲ್ಲವೂ ಸಮಸ್ಯೆಯಾಗುತ್ತಿದೆ’ ಎಂದರು.

‘ಈ ವಿವಾದದಲ್ಲಿ ಆಡಳಿತದ ಮುಂದೆ ದೊಡ್ಡ ಸವಾಲು ಇದೆ. ಒಂದು ಕಡೆ ಕಾನೂನು, ಇನ್ನೊಂದು ಕಡೆ ದಿನದ ದುಡಿಮೆಯ ಮೇಲೆ ಬದುಕುತ್ತಿರುವ ಸಣ್ಣ ವ್ಯಾಪಾರಸ್ಥರ ಕುಟುಂಬಗಳು ಇವೆ. ಪರಿಹಾರವು ಕೇವಲ ಕಡತಗಳಲ್ಲಿ ಸೀಮಿತವಾಗದೆ, ಮಾನವೀಯ ನೆಲೆಯಲ್ಲಿ ಮೂಡಿ ಬರಬೇಕು’ ಎಂದೂ ವ್ಯಾಪಾರಿಗಳು ಕೋರಿದರು.

ಶಾಸಕ ಆಸಿಫ್ ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಪೊಲೀಸ್ ಆಯುಕ್ತ ಭೂಷಣ್ ಬೊರಸೆ, ಖಾಸಗಿ ಮಾರುಕಟ್ಟೆ ವರ್ತಕರಾದ ಮೋಹನ ಮನ್ನೋಳ್ಕರ್, ಇಕ್ಬಾಲ್ ಡೋಣಿ ಹಲವರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-21-1104821123

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.