ಬೈಲಹೊಂಗಲ: ‘ಸಮೀಪದ ಇಂಚಲ ಗ್ರಾಮದ ಚಚಡಿ ರಸ್ತೆಯ ಪಕ್ಕದಲ್ಲಿರುವ ಇಂಚಲ ಗ್ರಾಮದ ಸರ್ವೆ ಸಂಖ್ಯೆ 820ರಲ್ಲಿ ಕೆಇಬಿ ನಿಯೋಜನೆಗಾಗಿ 4 ಎಕರೆ ಭೂಮಿ ಮಂಜೂರು ಮಾಡಲಾಗಿದೆ. ಆದರೆ ಈ ಗೈರಾನಿ ಭೂ ಜಾಗದಲ್ಲಿ ಹಾಕಿರುವ ತಂತಿ ಬೇಲಿಯಿಂದ ರೈತರು ಹಾಗೂ ವಿದ್ಯಾರ್ಥಿಗಳಿಗೆ ಸಂಚಾರಕ್ಕೆ ತೊಂದರೆ ಉಂಟಾಗಿದೆ’ ಎಂದು ಒತ್ತಾಯಿಸಿ ಗ್ರಾಮಸ್ಥರು ಉಪವಿಭಾಗಾಧಿಕಾರಿ ಪ್ರವೀಣ ಜೈನ್ ಅವರಿಗೆ ಮನವಿ ಅರ್ಪಿಸಿದರು.

‘ಈ ಜಾಗದ ಮೂಲಕ ರೈತರು ತಮ್ಮ ಹೊಲಗಳಿಗೆ ಚಚಡಿ ರಸ್ತೆಯಿಂದ ಮೇಕಲಮರಡಿ ರಸ್ತೆಯವರೆಗೆ ಸಂಚರಿಸುತ್ತಿದ್ದರು. ಇಲ್ಲಿ ಮಧ್ಯದಲ್ಲಿ ಸರ್ಕಾರದ ಬಿಸಿಎಂ ಹಾಸ್ಟೆಲ್ ಇರುವುದರಿಂದ ವಿದ್ಯಾರ್ಥಿಗಳು ಶಾಲೆ– ವಸತಿ ನಿಲಯಕ್ಕೆ ಹೋಗಿ ಬರಲು ಇದೇ ದಾರಿ ಬಳಸುತ್ತಿದ್ದರು. ಇದೀಗ ತಂತಿ ಬೇಲಿ ಹಾಕಿರುವ ಕಾರಣ ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ತೆರಳಲು ಹಾಗೂ ವಿದ್ಯಾರ್ಥಿಗಳು ಸಂಚಾರ ನಡೆಸಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ಮುಖಂಡರಾದ ಅಪ್ಪಾಸಾಹೇಬ ಲಕ್ಕುಂಡಿ, ಅಕಗಬಸಾಬ ಲಕ್ಕುಂಡಿ, ರಾಜೇಸಾಬ ಲಕ್ಕುಂಡಿ, ಶಿವಾನಂದ ಬೇವಿನಕೊಪ್ಪ, ಮಲ್ಲಪ್ಪ ಬೇವಿನಕೊಪ್ಪ, ಚಂದ್ರಶೇಖರಯ್ಯ ಪಾಟೀಲ, ಪ್ರೀತಮ ಕರಿಗಾರ, ದೊಡ್ಡಪ್ಪ ಶಿದ್ನಾಳ, ಸಿದ್ದಪ್ಪ ಗೊವನಕೊಪ್ಪ, ಸುಭಾಸ ಜೈನರ, ಸುರನಾಯ್ಕ ರಾಯನಾಯ್ಕರ, ಬಸಪ್ಪ ಜಕಾತಿ, ಗುರುಶಾಂತ ಬಾಗೇವಾಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-21-998578308

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.