ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಸಾಣಿಕೊಪ್ಪ ಗ್ರಾಮದಲ್ಲಿ ಸೋಮವಾರ, ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿಯೊಂದು ರಸ್ತೆ ಬದಿಯ ಗೂಡಂಗಡಿಗೆ ನುಗ್ಗಿದ್ದರಿಂದ ವೃದ್ಧ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಮೃತಪಟ್ಟವರನ್ನು ಸಾಣಿಕೊಪ್ಪ ಗ್ರಾಮದ ಈರಪ್ಪ ಸಿದ್ರಾಮಪ್ಪ ಗುರುವನ್ನವರ ಎಂದು ಗುರುತಿಸಲಾಗಿದೆ. ಗಾಯಗೊಂಡ ಅಂಗಡಿ ಮಾಲೀಕರಾದ ಭಾಗ್ಯಶ್ರೀ ಅಣ್ಣಪ್ಪ ಬಣವನ್ನವರ ಹಾಗೂ ಪ್ರಕಾಶ ಮಲ್ಲಪ್ಪ ಹರಿಜನ ಅವರನ್ನು ಬೈಲಹೊಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೆದ್ದಾರಿಯಲ್ಲಿ ಬಂದ ಸಿಮೆಂಟ್ ಕಾಂಕ್ರೀಟ್ ಕಲೆಸುವ ಲಾರಿ ಬ್ರೇಕ್ ಫೇಲ್ ಆಗಿದ್ದರಿಂದ ನೇರವಾಗಿ, ರಸ್ತೆ ಪಕ್ಕದ ತಗಡಿನ ಗೂಡಂಗಡಿಗೆ ನುಗ್ಗಿತು. ಅಂಗಡಿಯಲ್ಲಿದ್ದ ಮೂವರೂ ಗಂಭೀರವಾಗಿ ಗಾಯಗೊಂಡರು. ಸ್ಥಳೀಯರು ಸಹಾಯಕ್ಕೆ ಓಡಿ ಬಂದರು. ಮೂವರನ್ನೂ ವಾಹನಗಳಲ್ಲಿ ಆಸ್ಪತ್ರೆಗೆ ಸಾಗಿಸಿದರು. ಆದರೆ, ಮಾರ್ಗಮಧ್ಯದಲ್ಲೇ ಈರಪ್ಪ ಕೊನೆಯುಸಿರೆಳೆದರು. ಇನ್ನಿಬ್ಬರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.

ಬೈಲಹೊಂಗಲದಿಂದ ಸಂಪಗಾಂವ ಕಡೆಗೆ ಸಾಗುತ್ತಿದ್ದ ಲಾರಿ ಅತ್ಯಂತ ವೇಗವಾಗಿ ಚಲಿಸಿತು. ಸಮೀಪದಲ್ಲೇ ಬಸ್ ನಿಲ್ದಾಣವಿದ್ದು ಜನರ ಓಡಾಟ ಕೂಡ ಹೆಚ್ಚಾಗಿತ್ತು. ಆದರೂ ಲಾರಿ ಚಾಲಕ ನಿಷ್ಕಾಳಜಿಯಿಂದ ಓಡಿಸಿದ. ಬ್ರೇಕ್ ವಿಫಲವಾಗಿ ಈ ಅವಘಡ ಸಂಭವಿಸಿತು ಎಂದು ಸ್ಥಳದಲ್ಲಿದ್ದವರು ಮಾಹಿತಿ ನೀಡಿದರು.

ಚಾಲಕ ಲಾರಿಯನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾದ. ಡಿಕ್ಕಿಯ ತೀವ್ರತೆಗೆ ಅಂಗಡಿ ಸಂಪೂರ್ಣ ನಜ್ಜುಗುಜ್ಜಾಯಿತು. ಘಟನಾ ಸ್ಥಳಕ್ಕೆ ಐಪಿಎಸ್ ಪ್ರೊಬೆಶನರಿ ಅಧಿಕಾರಿ ಡಾ.ಭಾನುಪ್ರಕಾಶ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-21-119051315

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.