ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮೇ 28ರಂದು ಶ್ರದ್ಧೆಯಿಂದ ಬಕ್ರೀದ್ ಆಚರಣೆಗೆ ಮುಸ್ಲಿಮರು ಸಿದ್ಧವಾಗಿದ್ದಾರೆ.

ಇಲ್ಲಿನ ನ್ಯಾಯಾಲಯ ಆವರಣದ ಬಳಿ ಇರುವ ಈದ್ಗಾ ಮೈದಾನದಲ್ಲಿ ಗುರುವಾರ ಬೆಳಿಗ್ಗೆ 9ಕ್ಕೆ ಸಾಮೂಹಿಕ ಪ್ರಾರ್ಥನೆ ನೆರವೇರಲಿದೆ. ಇದಕ್ಕಾಗಿ ಹಬ್ಬದ ಮುನ್ನಾ ದಿನವಾದ ಬುಧವಾರ ಕಾರ್ಮಿಕರು ಮೈದಾನ ಸಜ್ಜುಗೊಳಿಸುತ್ತಿರುವುದು ಕಂಡುಬಂತು.

ಇದಲ್ಲದೆ, ಕೋಟೆ ಆವರಣದಲ್ಲಿನ ಹಳೆಯ ಮಸೀದಿ ಹಾಗೂ ನಗರದ ಎಲ್ಲ ಮಸೀದಿಗಳಲ್ಲೂ ಮುಸ್ಲಿಮರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ, ಶುಭಾಶಯ ವಿನಿಮಯ ಮಾಡಿಕೊಳ್ಳಲಿದ್ದಾರೆ.

ಜಿಲ್ಲೆಯ ವಿವಿಧ ತಾಲ್ಲೂಕು, ಹೋಬಳಿ ಮತ್ತು ಗ್ರಾಮಗಳ ಈದ್ಗಾ ಮೈದಾನಗಳು ಸಾಮೂಹಿಕ ಪ್ರಾರ್ಥನೆಗೆ ಸಿದ್ಧವಾಗಿವೆ.

‘ತ್ಯಾಗ ಮತ್ತು ಬಲಿದಾನದ ಪ್ರತೀಕ ಬಕ್ರೀದ್ ಹಬ್ಬ. ಇದರ ಅಂಗವಾಗಿ ಮುಸ್ಲಿಮರು ಕುರಿ, ಮೇಕೆಗಳನ್ನು ಖರೀದಿಸಿ, ಕುರ್ಬಾನಿ(ಪ್ರಾಣಿಬಲಿ) ನೀಡಿ, ‘ಅಲ್ಲಾಹು’ವಿನ ಕೃಪೆಗೆ ಪಾತ್ರರಾಗುತ್ತಾರೆ. ಕುಟುಂಬಸ್ಥರು ಮತ್ತು ಹಿತೈಷಿಗಳನ್ನು ತಮ್ಮ ಮನೆಗೆ ಆಹ್ವಾನಿಸಿ, ಒಟ್ಟಾಗಿ ಭೋಜನ ಸವಿಯುತ್ತಾರೆ’ ಎಂದು ಬೆಳಗಾವಿಯ ಕೇಂದ್ರಸ್ಥಾನ ಮಹಮ್ಮದೀಯಾ ಮಸೀದಿಯ ಧರ್ಮಗುರು ಖಾರಿ ಜಾಕೀರ್ಹುಸೇನ್ ಆರೀಫ್ಖಾನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಸ್ಲಿಮರು ಪ್ರೀತಿ, ಸಹಬಾಳ್ವೆಯಿಂದ ಹಬ್ಬ ಆಚರಿಸಬೇಕು’ ಎಂದರು.

ಖರೀದಿ ಜೋರು: ಬಕ್ರೀದ್ ಪ್ರಯುಕ್ತ ಖಡೇಬಜಾರ್, ಗಣಪತ ಗಲ್ಲಿ, ಮಾರುತಿ ಗಲ್ಲಿ, ಖಂಜರ್ ಗಲ್ಲಿ ಸೇರಿದಂತೆ ಬೆಳಗಾವಿಯ ಮಾರುಕಟ್ಟೆ ಪ್ರದೇಶಗಳಲ್ಲಿ ಬುಧವಾರ ಸಂಜೆ ಖರೀದಿ ಭರಾಟೆ ಜೋರಾಗಿತ್ತು.

ನಗರ ಮಾತ್ರವಲ್ಲದೆ; ವಿವಿಧೆಡೆಯಿಂದ ಬಂದಿದ್ದ ಗ್ರಾಹಕರು ಸಿಹಿಖಾದ್ಯ ಶಿರ್–ಕುರ್ಮಾ ತಯಾರಿಕೆಗೆ ಬೇಕಿರುವ ವಿವಿಧ ಒಣಹಣ್ಣುಗಳು ಮತ್ತು ಶಾವಿಗೆ ಖರೀದಿಸಿದರು. ಕೆಲವರು ಟೋಪಿ, ಅತ್ತರ್ ಮತ್ತಿತರ ವಸ್ತುಗಳನ್ನು ಖರೀದಿಸುತ್ತಿರುವುದು ಕಂಡುಬಂತು.

ಏಕಕಾಲಕ್ಕೆ ಹೆಚ್ಚಿನ ಜನರು ಮಾರುಕಟ್ಟೆಗೆ ಲಗ್ಗೆ ಇಟ್ಟ ಕಾರಣ, ಸಂಚಾರದಟ್ಟಣೆ ಕಂಡುಬಂತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-21-1560327216

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.