ಸತ್ತಿಗೇರಿ: ಸಮೀಪದ ಕೋಟೂರ– ಶಿವಾಪುರ ಗ್ರಾಮದ ಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ವಿಶ್ವಾಸೋತ್ಸವ ಕಾರ್ಯಕ್ರಮ ವಿಶ್ವಾಸ ಅಣ್ಣ ಅಭಿಮಾನಿ ಬಳಗದ ಆಶ್ರಯದಲ್ಲಿ, ಗೋಕಾಕ ಫಾಲ್ಸ್ನ ಗುರು ರಾಘವೇಂದ್ರ ಮೆಲೋಡಿಸ್ ವತಿಯಿಂದ ಹಾಸ್ಯ– ರಸಮಂಜರಿ ಕಾರ್ಯಕ್ರಮ ಬುಧವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ವಿಶ್ವಾಸ್ ವೈದ್ಯ, ‘ಬಸವಣ್ಣನವರ ತತ್ದ ಆದರ್ಶಗಳು ನಮ್ಮ ಜೀವನಕ್ಕೆ ದಾರಿದೀಪ. ಅಂತಹ ಮಹಾಪುರುಷರ ಸ್ಮರಣೆ ಜೊತೆಗೆ ಹಾಸ್ಯ ಕಾರ್ಯಕ್ರವದ ಮೂಲಕ ಗ್ರಾಮಸ್ಥರೆಲ್ಲ ಒಗ್ಗೂಡಿ ನಲಿದ ಕ್ಷಣಗಳು ಮನಸ್ಸಿಗೆ ಮುದ ನೀಡಿದವು’ ಎಂದರು.

ಸಚಿವ ಸತೀಶ ಜಾರಕಿಹೊಳಿ ಅವರ ಆಪ್ತ ಸಹಾಯಕ ಅರವಿಂದ ಕಾರ್ಚಿ ಮಾತನಾಡಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಹಾದೇವಪ್ಪ ನಿಂ. ಗಡ್ಡಿ ಅಧ್ಯಕ್ಷತೆ ವಹಿಸಿದ್ದರು. ಯರಗಟ್ಟಿಯ ಎ.ಪಿ.ಎಂ.ಸಿ ಅಧ್ಯಕ್ಷ ನೀಲಕಂಠ ಶೀದ್ದಬಸನ್ನವರ ಹಾಗೂ ಸತ್ತಿಗೇರಿಯ ಕಾಂಗ್ರೆಸ್ ಯುವ ಮುಖಂಡರಾದ ಪ್ರಕಾಶ ವಾಲಿ, ಬೆಳಗಾವಿಯ ಕೆ.ಎಂ.ಎಫ್.ನಿರ್ದೆಶಕರಾದ ಶಂಕರ ಇಟ್ನಾಳ, ಗುತ್ತಿಗೆದಾರ ಮಹಾಂತೇಶ ಉರಬಿನವರ, ಚಾಯಪ್ಪ ಹುಂಡೇಕಾರ ಇತರರು ಇದ್ದರು.

ಇದಕ್ಕೂ ಮೊದಲು ಶಾಸಕರನ್ನು ಹೂವುಗಳಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-21-501313080

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.