ಬೆಳಗಾವಿ: ‘ಸಮಾನತೆಗಾಗಿ ಹೋರಾಡಿದ ಬಸವಣ್ಣ ನಮ್ಮ ನಾಡಿನ ಸಾಂಸ್ಕೃತಿಕ ನಾಯಕ ಮತ್ತು ಸ್ವಾಭಿಮಾನದ ಪ್ರತೀಕ. ಅವರ ಕಂಚಿನ ಪ್ರತಿಮೆ ಬೆಳಗಾವಿ ಮಹಾನಗರದ ಹೃದಯಭಾಗದಲ್ಲಿ ಅನಾವರಣವಾಗುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ರಾಷ್ಟ್ರೀಯ ಘಟಕದ ಉಪಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.

ಇಲ್ಲಿನ ಬಸವೇಶ್ವರ ವೃತ್ತದ ಬಸವೇಶ್ವರ ಉದ್ಯಾನಕ್ಕೆ ಮಹಾರಾಷ್ಟ್ರದ ಸೊಲ್ಲಾಪುರದಿಂದ ಆಗಮಿಸಿದ ಬಸವಣ್ಣನ ಕಂಚಿನ ಪ್ರತಿಮೆಗೆ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಈ ಹಿಂದೆ ಬಸವೇಶ್ವರ ವೃತ್ತದಲ್ಲಿದ್ದ ಬಸವಣ್ಣನ ಪ್ರತಿಮೆ ಶಿಥಿಲಗೊಂಡಿತ್ತು. ಈಗ ಮಹಾನಗರ ಪಾಲಿಕೆ ಅನುದಾನದಲ್ಲಿ ಹೊಸದಾಗಿ ಬಸವಣ್ಣನ ಪ್ರತಿಮೆ ಸಿದ್ಧಗೊಂಡಿದೆ. ಬಸವಾಭಿಮಾನಿಗಳ ಕನಸು ಸಾಕಾರವಾಗಲಿದೆ. ಶೀಘ್ರ ಉದ್ಯಾನ ಕಾಮಗಾರಿ ಪೂರ್ಣಗೊಳಿಸಿ, ಬಸವಣ್ಣನ ಪ್ರತಿಮೆ ಪ್ರತಿಪಿಸಲಾಗುವುದು’ ಎಂದು ತಿಳಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ವಕೀಲ ಎಂ.ಬಿ.ಝಿರಲಿ, ಡಾ.ಎಚ್.ಬಿ.ರಾಜಶೇಖರ, ಚಂದ್ರಶೇಖರ ಬೆಂಬಳಗಿ, ಬಾಲ ಚಂದ್ರಬಾಗಿ, ಆರ್.ಪಿ.ಪಾಟೀಲ, ಎಸ್.ಎಂ. ದೊಡಮನಿ, ಚೇತನ ಅಂಗಡಿ, ವಿದ್ಯಾ ಗೌಡರ, ಸರೋಜನಿ ನಿಶಾನದಾರ, ವಿರೂಪಾಕ್ಷ ನಿಶಾನದಾರ, ಸೋಮಲಿಂಗ ಮಾವಿನಕಟ್ಟಿ, ವಿ.ಕೆ.ಪಾಟೀಲ, ಜ್ಯೋತಿ ಬಾದಾಮಿ ಉಪಸ್ಥಿತರಿದ್ದರು.

ಕೆಎಲ್ಇ ಸಂಗೀತ ಶಾಲೆಯ ಸುನೀತಾ ಪಾಟೀಲ ಹಾಗೂ ಸಂಗಡಿಗರು ವಚನ ಪ್ರಾರ್ಥನೆ ಮಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-21-296304053

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.