ಹುಕ್ಕೇರಿ: ತಾಲ್ಲೂಕಿನ ಬಸ್ತವಾಡ ಗ್ರಾಮದೇವ ಕಾಡಸಿದ್ದೇಶ್ವರ ಜಾತ್ರಾ ಮಹೋತ್ಸವ (ಯುಗಾದಿ ಅಮವಾಸ್ಯೆ) ಮಾ.18ರಿಂದ ಆರಂಭವಾಗಿ ಮಾ.22ರವರೆಗೆ ಸಡಗರ ಸಂಭ್ರಮದಿಂದ ಭಾನುವಾರ ಸಂಪನ್ನಗೊಂಡಿತು.

ಕೊನೆಯ ದಿನ ಬೆಳಿಗ್ಗೆ 8ಕ್ಕೆ ಸಕ್ಕರೆ ನೈವೇದ್ಯ ಅರ್ಪಿಸಿದರು. ಮಧ್ಯಾಹ್ನ ಸಕಲ ವಾಧ್ಯಮೇಳದೊಂದಿಗೆ ಪಲ್ಲಕ್ಕಿ ಉತ್ಸವ ನೂರಾರು ಭಕ್ತರ ನಡುವೆ ಸಂಭ್ರಮದಿಂದ ಜರುಗಿತು. ಪಲ್ಲಕ್ಕಿ ಉತ್ಸವದಲ್ಲಿ ಭಕ್ತರು ಒಣ ಉತ್ತತ್ತಿ (ಖಾರಿಕ್ ), ಕೊಬ್ಬರಿ ಮತ್ತು ತೆಂಗಿನಕಾಯಿ ಹಾರಿಸಿ ಭಕ್ತಿ ಸಮರ್ಪಿಸಿದರು. ಬೇಡಿಕೊಂಡ ಭಕ್ತರು ಐದೂ ದಿನ ದಂಡವತ್ತೆ (ದೀಡ ನಮಸ್ಕಾರ) ಹಾಕಿ ಭಕ್ತಿ ನಮನ ಸಲ್ಲಿಸಿದರು. ಸಾವಿರಾರು ಭಕ್ತರಿಗೆ ಸರ್ಕಾರಿ ವೈದ್ಯ ಬೆಳಗಾವಿಯ ಡಾ.ಸಂಜಯ ಶಿವಪುತ್ರ ದೊಡಮನಿ ಮಹಾಪ್ರಸಾದ ವ್ಯವಸ್ಥೆ ಮಾಡಿದ್ದರು.

ವಿಶೇಷ: ಕೊನೆಯ ದಿನ ಗ್ರಾಮದ ಪಲ್ಲಕ್ಕಿ ಉತ್ಸವದಲ್ಲಿ ಶೇ 90ರಷ್ಟು ಪರಿಶಿಷ್ಟ ಜಾತಿ ಮತ್ತು ಪಂಗಡ ಜನರು ಪಾಲ್ಗೊಂಡು ಭಂಡಾರ ಸಿಂಪಡಿಸುತ್ತ ಜಾತ್ರೆಗೆ ಸಂಭ್ರಮ ತಂದರು. ಯುವಕರು ವಾದ್ಯಮೇಳಕ್ಕೆ ಕುಣಿದು ಕುಪ್ಪಳಿಸಿದರು.

ಪಿಕೆಪಿಎಸ್ ಅಧ್ಯಕ್ಷ ಅಶೋಕ ಪಾಟೀಲ, ಮುಖಂಡರಾದ ದಯಾನಂದ ವಂಟಮೂರಿ, ನೇಮಣ್ಣ ಮಗದುಮ್ಮ, ಕಾಡಪ್ಪ ಮಗದುಮ್ಮ, ಪರಗೌಡ ಪಾಟೀಲ, ಶಂಕರಗೌಡ ಪಾಟೀಲ, ಆನಂದ ಲಕ್ಕುಂಡಿ, ಬಸಗೌಡ ಪಾಟೀಲ, ಬಸಯ್ಯ ಪೂಜೇರಿ, ಬಸವರಾಜ ನಾಯಿಕ, ಸಂಜೀವಕುಮಾರ ಮಗದುಮ್ಮ ಸೇರಿದಂತೆ ವಿವಿಧ ಸಮುದಾಯದ ಯುವಕ ಮಂಡಳ ಯುವಕರು ಜಾತ್ರೆ ಯಶಸ್ಸಿಗೆ ಶ್ರಮಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-21-916014603

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.