ಬೆಳಗಾವಿ: ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟಕ್ಕೆ ಹಾಲು ಪೂರೈಕೆ ಮಾಡುತ್ತಿರುವ ಕ್ರಿಯಾಶೀಲ ಸದಸ್ಯರು ಮರಣ ಹೊಂದಿದ್ದಲ್ಲಿ ಅವರ ಕುಟುಂಬಕ್ಕೆ ₹60 ಸಾವಿರ ಮತ್ತು ಹಾಲು ಪೂರೈಕೆ ಮಾಡದಿದ್ದರೂ ಸದಸ್ಯರಾದವರು ಮರಣ ಹೊಂದಿದ್ದಲ್ಲಿ ತಲಾ ₹25 ಸಾವಿರ ನೀಡಲು ಒಕ್ಕೂಟವು ನಿರ್ಧರಿಸಿದೆ.

ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರುಗಿದ ಆಡಳಿತ ಮಂಡಳಿಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಮರಣ ಹೊಂದಿದ ರೈತ ಸದಸ್ಯರಿಗೆ 1₹ ಲಕ್ಷದವರೆಗೆ ವಿಮಾ ಸೌಲಭ್ಯವನ್ನು ಕಲ್ಪಿಸಿಕೊಡುವ ಟೆಂಡರ್ ಪ್ರಕ್ರಿಯೆ ಕರೆಯುವ ಇರಾದೆ ಹೊಂದಿತ್ತಲಾಗುತ್ತು. ಆದರೂ ವಯೋಮಾನದ ಹಿನ್ನೆಲೆಯಲ್ಲಿ ಇದನ್ನು ರದ್ದುಪಡಿಸಿ, ರೈತರ ಹಿತದೃಷ್ಟಿಯಿಂದ 70 ವರ್ಷ ಮೇಲ್ಪಟ್ಟ ರೈತರು ಈ ಯೋಜನೆಗೆ ಒಳಪಡುವಂತೆ ಮಾಡಲಾಗಿತ್ತು. 18 ರಿಂದ 70 ವರ್ಷ ಒಳಗಿನ ರೈತರು ಮಾತ್ರ ಈ ಯೋಜನೆಗೆ ಒಳಪಡುತ್ತಿದ್ದರು. ಇದರಿಂದ ಸುಮಾರು 5 ಸಾವಿರ ರೈತರು ಅನ್ಯಾಯಕ್ಕೆ ಒಳಪಡುವ ಆತಂತಕವಿತ್ತು. ಕಂತು ವಿಮೆ ಸೌಲಭ್ಯವನ್ನು ರದ್ದು ಮಾಡಿ, ಒಕ್ಕೂಟದಿಂದಲೇ ರೈತ ಕಲ್ಯಾಣ ಸಂಘಕ್ಕೆ ನೇರವಾಗಿ ಪಾವತಿಸಲು ಕ್ರಮ ಕೈಗೊಂಡಿರುವುದಾಗಿ ಬಾಲಚಂದ್ರ ಜಾರಕಿಹೊಳಿ ಹೇಳಿದರು.

‘ಜಿಲ್ಲೆಯಲ್ಲಿ ಸುಮಾರು 33 ಸಾವಿರ ರೈತರು ನಮ್ಮ ಒಕ್ಕೂಟದ ಸದಸ್ಯರಿದ್ದು, ಇದರಲ್ಲಿ 12 ರಿಂದ 15 ಸಾವಿರ ರೈತರು ಹಾಲು ಪೂರೈಕೆ ಮಾಡುತ್ತಿದ್ದು, ಉಳಿದ 18 ಸಾವಿರ ಸದಸ್ಯರು ಹಾಲು ಹಾಕದೇ ಒಕ್ಕೂಟದ ಸದಸ್ಯತ್ವವನ್ನು ಪಡೆದಿದ್ದಾರೆ’ ಎಂದು ತಿಳಿಸಿದರು.

ಆಡಳಿತ ಮಂಡಳಿಯ ಸದಸ್ಯರಾದ ಬಾಬು ಕಟ್ಟಿ, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಗಿರೆಣ್ಣವರ, ಡಾ.ಬಸವರಾಜ ಪರನ್ನವರ, ಬಾಬುರಾವ ವಾಘ್ಮೊಡೆ, ವಿರೂಪಾಕ್ಷ ಈಟಿ, ರಾಯಪ್ಪ ಡೂಗ, ಪ್ರಕಾಶ ಅಂಬೋಜಿ, ಮಹಾದೇವ ಬಿಳಿಕುರಿ, ಸಂಜಯ ಶಿಂತ್ರಿ, ರಮೇಶ ಅಣ್ಣಿಗೇರಿ, ಸದೆಪ್ಪ ವಾರಿ, ಶಂಕರ ಇಟ್ನಾಳ, ಸವಿತಾ ಖಾನಪ್ಪಗೋಳ, ವಸಂತ ಕರಿಗಾರ, ಅಜೀತ ದೇಸಾಯಿ, ಬಸವರಾಜ ಮಾಳೆದವರ, ಎಂಡಿ ಡಾ.ಶ್ರೀಕಾಂತ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-21-1114822977

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.